ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ

ಮಂಗಳವಾರ, 27 ಜೂನ್ 2017 (09:11 IST)
ಟೀಮ್ ಇಂಡಿಯಾದ ಪ್ರಮುಖ ಶಕ್ತಿಯೆಂದರೆ ಬ್ಯಾಟಿಂಗ್. ಈ ಬ್ಯಾಟಿಂಗ್ ಶಕ್ತಿ ಮೂಲಕವೇ ಪೋರ್ಟ್ ಆಫ್ ಸ್ಪೇನ್`ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದೆ.
 

ಮಳೆ ಅಡ್ಡಿಯಾದ ಪಂದ್ಯವನ್ನ 43 ಓವರ್`ಗಳಿಗೆ ಫಿಕ್ಸ್ ಮಾಡಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 310/5 ರನ್ ಪೇರಿಸಿತ್ತು. ಈ ಮೂಲಕ ಭಾರತ ತಂಡ ಅತಿ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಪೇರಿಸಿದ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. 96 ಬಾರಿ ಭಾರತ 300ಕ್ಕೂ ಅಧಿಕ ರನ್ ಗಳಿಸಿದ್ದು, ಆಸ್ಟ್ರೇಲಿಯಾದ ದಾಖಲೆ ಹಿಂದಿಕ್ಕಿದೆ. ಆಸ್ಟ್ರೇಲಿಯಾ ಇದುವರೆಗೆ 95 ಬಾರಿ 300ಕ್ಕೂ ಅಧಿಕ ರನ್ ಗಳಿಸಿದೆ.

ಉಳಿದಂತೆ ದಕ್ಷಿಣ ಆಫ್ರಿಕಾ 77, ಪಾಕಿಸ್ತಾನ 69, ಶ್ರೀಲಂಕಾ 63 ಭಾರಿ 300ಕ್ಕೂ ಅಧಿಕ ರನ್ ಗಳಿಸಿದ್ದು, ಟಾಪ್ ರಲ್ಲಿ ಸ್ಥಾನ ಪಡೆದಿವೆ. 1996ರ ಏಪ್ರಿಲ್`ನಲ್ಲಿ ಶಾರ್ಜಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಮೊದಲ ಬಾರಿಗೆ 300 ರನ್ ಗಳಿಸಿತ್ತು. ಒಟ್ಟು 96 ಬಾರಿ ಭಾರತ ಈ ಸಾಧನೆ ಮಾಡಿದ್ದು, ಇದರಲ್ಲಿ 75 ಪಂದ್ಯ ಗೆದ್ದಿದ್ದು, 19 ಪಂದ್ಯಗಳಲ್ಲಿ ಸೋತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ