ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಫೀಲ್ಡಿಂಗ್, ಬೌಲಿಂಗ್ ನದ್ದೇ ಚಿಂತೆ

ಗುರುವಾರ, 22 ಸೆಪ್ಟಂಬರ್ 2022 (08:00 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ಎಲ್ಲರ ಟೀಕೆಗೆ ಗುರಿಯಾಗಿದೆ.

ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾ ಈ ವಿಭಾಗದಲ್ಲಿ ಸುಧಾರಣೆ ಕಾಣಲೇ ಬೇಕಿದೆ. ಫೀಲ್ಡಿಂಗ್ ವಿಭಾಗ ಸುಧಾರಣೆ ಕಾಣದೇ ಹೋದಲ್ಲಿ ಎಷ್ಟೇ ರನ್ ಗಳಿಸಿಯೂ ಅದನ್ನು ಡಿಫೆಂಡ್ ಮಾಡಿಕೊಳ್ಳಲಾಗದೇ ಭಾರತ ಸೋಲುತ್ತಿದೆ. ಜೊತೆಗೆ ಪ್ರಮುಖ ಬೌಲರ್ ಗಳೇ ಕೈಕೊಡುತ್ತಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ.

ಏಷ್ಯಾ ಕಪ್ ನಲ್ಲೂ ಇದೇ ಸಮಸ್ಯೆಯಾಗಿತ್ತು. ಇದರಿಂದಾಗಿ ಟಾಸ್ ಗೆಲ್ಲುವುದೇ ಭಾರತಕ್ಕೆ ಮುಖ್ಯವಾಗುತ್ತಿದೆ. ಒಂದು ವೇಳೆ ಟಾಸ್ ಸೋತಲ್ಲಿ ಪಂದ್ಯವೂ ಸೋಲುವ ಸ್ಥಿತಿಯಾಗುತ್ತಿದೆ. ಟಿ20 ವಿಶ್ವಕಪ್ ಗೆ ಮೊದಲು ಭಾರತ ಈ ಸಮಸ್ಯೆಗಳನ್ನು ಸರಿಪಡಿಸಲೇಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ