ಟೀಂ ಇಂಡಿಯಾಗೆ ಹೊಸ ನಾಯಕನ ಆಯ್ಕೆ ಮಂಗಳವಾರ
ವಿಶ್ವಕಪ್ ಬಳಿಕ ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿ ಹೊರನಡೆಯಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ಹೆಸರು ಬಲವಾಗಿ ಕೇಳಿಬರುತ್ತಿದೆ.
ಆದರೆ ಅಧಿಕೃತವಾಗಿ ಬಿಸಿಸಿಐ ಸಭೆ ಸೇರಿ ಸರ್ವಾನುಮತದಿಂದ ನಾಯಕನ ಆಯ್ಕೆ ಮಾಡಲಿದೆ. ನವಂಬರ್ 17 ರಿಂದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಈ ಸರಣಿಗೂ ಮೊದಲು ಹೊಸ ನಾಯಕನ ಆಯ್ಕೆ ನಡೆಯಲಿದೆ.