ನೀವ್ಯಾಕೆ ಹೀಗೆ ಮಾಡಿದ್ರಿ, ಸೂರ್ಯಕುಮಾರ್ ಯಾದವ್ ಮೇಲೆ ಸಿಟ್ಟಾದ ಫ್ಯಾನ್ಸ್
ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಏಷ್ಯಾ ಕಪ್ ನಲ್ಲಿ ಭಾಗಿಯಾಗಿರುವ ಎಲ್ಲಾ ತಂಡಗಳ ನಾಯಕರೂ ಇದ್ದರು. ಭಾರತ ಮತ್ತು ಪಾಕಿಸ್ತಾನ ತಂಡಗಳ ನಾಯಕರೂ ಒಂದೇ ವೇದಿಕೆ ಹಂಚಿಕೊಂಡಿದ್ದರು. ವೇದಿಕೆಯಲ್ಲಿ ಇಬ್ಬರೂ ಪರಸ್ಪರ ಮುಖ ನೋಡದೇ ಇದ್ದರೂ ಇದಕ್ಕೆ ಮೊದಲು ಸೂರ್ಯಕುಮಾರ್ ತಾವಾಗಿಯೇ ಪಾಕ್ ನಾಯಕನ ಕೈಲುಕಿದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವೇದಿಕೆಯಲ್ಲಿ ಎಲ್ಲಾ ನಾಯಕರು ಜೊತೆಯಾಗಿ ನಿಂತು ಫೋಟೋಗೆ ಪೋಸ್ ಕೊಟ್ಟ ಬಳಿಕ ಪಾಕ್ ನಾಯಕ ಸಲ್ಮಾನ್ ಅಘಾ ತಿರುಗಿಯೂ ನೋಡದೇ ವೇದಿಕೆಯಿಂದ ತೆರಳಿದ್ದರು. ಆದರೆ ಸೂರ್ಯ ಇತರೆ ನಾಯಕರ ಜೊತೆಗೆ ಸಲ್ಮಾನ್ ಅಘಾ ಬಳಿ ತೆರಳಿ ತಾವಾಗಿಯೇ ಶೇಕ್ ಹ್ಯಾಂಡ್ ಮಾಡಿದ್ದಾರೆ. ಇದಲ್ಲದೆ ಪಾಕಿಸ್ತಾನ ಮೂಲದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೊಹ್ಸಿನ್ ನಖ್ವಿ ಬಳಿ ತೆರಳಿ ಕೈಕುಲುಕಿದ್ದಾರೆ.
ಈ ವಿಚಾರಕ್ಕೆ ಭಾರತೀಯ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಪಾಕಿಸ್ತಾನ ನಾಯಕನ ಬಳಿ ನೀವಾಗಿಯೇ ತೆರಳಿ ಕೈ ಕುಲುಕುವ ಅಗತ್ಯವೇನಿತ್ತು? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಇನ್ನೂ ಮುಂದುವರಿದು ದೇಶದ್ರೋಹಿ ಎಂದು ಅತಿರೇಕ ಪದ ಬಳಸಿ ನಿಂದಿಸಿದ್ದಾರೆ.