ಇಂಧೋರ್ ಗೆದ್ದ ಟೀಂ ಇಂಡಿಯಾ ಈಗ ಏಕದಿನ ನಂ.1
ಮತ್ತೊಂದು ಸರಣಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಈಗ ಏಕದಿನ ನಂ.1 ತಂಡವಾಗಿದ್ದ ದ. ಆಫ್ರಿಕಾವನ್ನು (119 ಪಾಯಿಂಟ್) ಹಿಂದಕ್ಕೆ ತಳ್ಳಿ ನಂ.1 (120 ಅಂಕ) ತಂಡವಾಗಿ ಮೆರೆದಿದೆ. ಟೆಸ್ಟ್ ಕ್ರಿಕೆಟ್ ನಲ್ಲೂ ಭಾರತವೇ ನಂ.1. ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ನಂ.1 ಆಗಿ ಮೆರೆಯುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ.