ನವದೆಹಲಿ: ಟೀಂ ಇಂಡಿಯಾದಲ್ಲಿ ಒಮ್ಮೆ ಸ್ಥಾನ ಕಳೆದುಕೊಂಡರೆ ಮರಳಿ ಪಡೆಯುವುದೇ ಕಷ್ಟ. ಅದೂ ಬೌಲರ್ ಗಳ ವಿಚಾರದಲ್ಲಿ. ಇದೀಗ ಅಶ್ವಿನ್, ಜಡೇಜಾ ವಿಚಾರದಲ್ಲೂ ಹಾಗೇ ಆಗಿದೆ ಎಂದು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಶ್ವಿನ್, ಜಡೇಜಾ ಬಂದ ಮೇಲೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸಸ ಪಡೆಯುತ್ತಿರುವ ಹರ್ಭಜನ್ ಇದೀಗ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ರಂತಹ ಪ್ರತಿಭಾವಂತರ ದರ್ಬಾರಿನಲ್ಲಿ ಅಶ್ವಿನ್, ಜಡೇಜಾ ಮರಳಿ ತಂಡಕ್ಕೆ ಬರುವುದು ಕಷ್ಟ ಎಂದಿದ್ದಾರೆ.
‘ವಾಪಸಾತಿ ಎನ್ನುವುದು ಯಾವತ್ತೂ ಕಷ್ಟ. ಈಗ ಇರುವ ಸ್ಪಿನ್ನರ್ ಗಳು ಚೆನ್ನಾಗಿ ಪ್ರದರ್ಶನ ತೋರುತ್ತಿದ್ದಾರೆಂದರೆ ಹಿರಿಯ ಸ್ಪಿನ್ನರ್ ಗಳಿಗೆ ಮರಳಿ ತಂಡಕ್ಕೆ ಬರುವುದು ಕಷ್ಟವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ತಂಡಕ್ಕೆ ಜಡ್ಡು ಮತ್ತು ಅಶ್ವಿನ್ ಗೆ ಕಮ್ ಬ್ಯಾಕ್ ಮಾಡಲು ಕಠಿಣ ಪರಿಶ್ರಮಪಡಬೇಕಾದೀತು ಎಂದು ಅವರು ಹೇಳಿದ್ದಾರೆ. ಜಡೇಜಾ ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದರೂ, ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಿಲ್ಲ.