ಫಾರ್ಮ್ ಕಳೆದುಕೊಂಡ ಟೀಂ ಇಂಡಿಯಾ ಆಟಗಾರರಿಗೆಲ್ಲಾ ಇದೇ ವೇದಿಕೆ
ಮಂಗಳವಾರ, 31 ಜನವರಿ 2017 (12:30 IST)
ನವದೆಹಲಿ: ಕಳಪೆ ಫಾರ್ಮ್ ನಿಂದಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಔಟಾಗಿರುವ ಆರಂಭಿಕ ಶಿಖರ್ ಧವನ್ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ಮಿಂಚಿದ್ದಾರೆ.
ಆದರೆ ಟೀಂ ಇಂಡಿಯಾದ ಇನ್ನೊಬ್ಬ ಆರಂಭಿಕ ಗೌತಮ್ ಗಂಭೀರ್ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿ ದೆಹಲಿ ತಂಡ ಜಮ್ಮು ಕಾಶ್ಮೀರ ತಂಡವನ್ನು ಎಂಟು ವಿಕೆಟ್ ಗಳಿಂದ ಸೋಲಿಸಿತು.
ಧವನ್ 30 ಬಾಲ್ ಗಳಲ್ಲಿ 43 ರನ್ ಗಳಿಸಿ ಮಿಂಚಿದರು. ಗಂಭೀರ್ ಕೇವಲ 1 ರನ್ ಗಳಿಸಿ ಪೆವಲಿಯನ್ ಗೆ ಮರಳಿದರು. ಟೀಂ ಇಂಡಿಯಾದಲ್ಲಿ ಸ್ಥಾನ ವಂಚಿತರಾಗಿರುವ ಇನ್ನೊಬ್ಬ ಆಟಗಾರ ಇಶಾಂತ್ ಶರ್ಮಾ ವಿಕೆಟ್ ಕೀಳಲು ವಿಫಲರಾದರೂ 3 ಓವರ್ ಎಸೆದು ಕೇವಲ ಐದು ರನ್ ನೀಡಿ ಗಮನ ಸೆಳೆದರು.
ಇನ್ನೊಂದು ಪಂದ್ಯದಲ್ಲಿ ಹರ್ಯಾಣ ಪರ ಆಡಿದ ಟೀಂ ಇಂಡಿಯಾ ಸ್ಪಿನ್ನರ್ ಜಯಂತ್ ಯಾದವ್ ನಾಲ್ಕು ಓವರ್ ಗಳಲ್ಲಿ 10 ರನ್ ನೀಡಿ 1 ವಿಕೆಟ್ ಕಬಳಿಸಿ ತಾನು ಆಸ್ಟ್ರೇಲಿಯಾ ಸರಣಿಗೆ ಫಿಟ್ ಆಗಿದ್ದೇನೆಂದು ಸಾರಿದ್ದಾರೆ. ಇನ್ನೊಂದೆಡೆ ಹರ್ಭಜನ್ ಕೂಡಾ ಪಂಜಾಬ್ ಪರ ಆಡುತ್ತಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ವಂಚಿತರಿಗೆ ಈ ಕಿರು ಮಾದರಿ ಕ್ರಿಕೆಟ್ ಫಾರ್ಮ್ ಸಾಬೀತುಪಡಿಸುವ ವೇದಿಕೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ