ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎರಡನೇ ಡೋಸ್ ಲಸಿಕೆ

ಮಂಗಳವಾರ, 13 ಜುಲೈ 2021 (13:05 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೊರೋನಾ ಲಸಿಕೆ ಸಂಪೂರ್ಣವಾಗಿದೆ. ಇದೀಗ ಎರಡನೇ ಡೋಸ್ ಲಸಿಕೆಯನ್ನೂ ನೀಡಲಾಗಿದೆ.


ಮೊದಲ ಡೋಸ್ ಲಸಿಕೆಯನ್ನು ಕ್ರಿಕೆಟಿಗರು ತವರಿನಲ್ಲೇ ಪಡೆದಿದ್ದರು. ಅದಾದ ಬಳಿಕ ಕ್ವಾರಂಟೈನ್ ಅವಧಿ ಮುಗಿಸಿ ಇಂಗ್ಲೆಂಡ್ ವಿಮಾನವೇರಿದ್ದರು.

ಇದೀಗ ಎರಡನೇ ಡೋಸ್ ವೇಳೆ ಭಾರತಕ್ಕೆ ಮರಳಲು ಅಸಾಧ‍್ಯವಾಗಿರುವುದರಿಂದ ಇಂಗ್ಲೆಂಡ್ ನಲ್ಲಿಯೇ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೀಗ ಕೊರೋನಾ ಪರೀಕ್ಷೆಗೊಳಗಾಗಿ, ಬಯೋ ಬಬಲ್ ವಾತಾವರಣಕ್ಕೆ ಎಂಟ್ರಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ