ಒಲಿಂಪಿಕ್ಸ್ ಗೆ ತೆರಳಲಿರುವ ಅಥ್ಲಿಟ್ ಗಳ ಜೊತೆ ಪ್ರಧಾನಿ ಮೋದಿ ಇಂದು ಸಂವಾದ

ಮಂಗಳವಾರ, 13 ಜುಲೈ 2021 (10:18 IST)
ನವದೆಹಲಿ: ಟೋಕಿಯೋ ಒಲಿಪಿಂಕ್ಸ್ ಗೆ ತೆರಳಲಿರುವ ಭಾರತದ ಅಥ್ಲೆಟ್ ಗಳ ಜೊತೆ ಪ್ರಧಾನಿ ಮೋದಿ ಇಂದು ಸಂವಾದ ನಡೆಸಿ ಹುರಿದುಂಬಿಸಲಿದ್ದಾರೆ.


ಜುಲೈ 17 ರಂದು ಭಾರತದ ಅಥ್ಲೆಟ್ ಗಳು ಜಪಾನ್ ನತ್ತ ಪ್ರಯಾಣ ಬೆಳೆಸಲಿದ್ದಾರೆ. ಈ ಮೊದಲ ಬ್ಯಾಚ್ ನ ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದು, ಶುಭ ಹಾರೈಸಲಿದ್ದಾರೆ.

ಇಂದು ಸಂಜೆ 5 ಗಂಟೆಗೆ ಈ ಸಂವಾದ ಕಾರ್ಯಕ್ರಮ ನಡೆಯಲಿದೆ. 18 ವಿವಿಧ ವಿಭಾಗಳಲ್ಲಿ ಸ್ಪರ್ಧಿಸಲಿರುವ 126 ಕ್ರೀಡಾಳುಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ