ವಿಂಡೀಸ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಬೀಚ್ ವಾಲಿಬಾಲ್

ಮಂಗಳವಾರ, 4 ಜುಲೈ 2023 (08:30 IST)
Photo Courtesy: Twitter
ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡಲು ಕೆರೆಬಿಯನ್ ನಾಡಿಗೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರು ಬೀಚ್ ವಾಲಿಬಾಲ್ ಆಡಿ ರಿಲ್ಯಾಕ್ಸ್ ಆಗಿದ್ದಾರೆ.

ಕ್ರಿಕೆಟಿಗರು ಬೀಚ್ ವಾಲಿಬಾಲ್ ಆಡುವುದನ್ನು ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ. ವಿಂಡೀಸ್ ಕಡಲ ತೀರದಲ್ಲಿ ವಾಲಿಬಾಲ್ ಆಡುವುದಕ್ಕೆ ಫೇಮಸ್. ಸಾಮಾನ್ಯವಾಗಿ ಟೀಂ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಆಗಲು ಇಲ್ಲಿಗೆ ಬಂದಾಗಲೆಲ್ಲಾ ವಾಲಿಬಾಲ್ ಆಡುತ್ತಾರೆ.

ಸುದೀರ್ಘ ಸರಣಿಗೆ ಮುನ್ನ ಮಾನಸಿಕವಾಗಿ ರಿಲ್ಯಾಕ್ಸ್ ಆಗಲು ಈ ರೀತಿ ವಾಲಿಬಾಲ್ ಆಡಿಸಲಾಗಿದೆ ಎಂದು ಟ್ರೈನರ್ ಸೋಹಂ ದೇಸಾಯಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ