ವಿಕಿಪೀಡಿಯಾದಲ್ಲಿ ಹೆಚ್ಚು ಸರ್ಚ್ ಗೊಳಗಾದ ಟೀಂ ಇಂಡಿಯಾ ಆಟಗಾರರ ಲಿಸ್ಟ್

ಗುರುವಾರ, 30 ನವೆಂಬರ್ 2023 (09:10 IST)
ಮುಂಬೈ: ಅಕ್ಟೋಬರ್ ಮತ್ತು ನವಂಬರ್ ತಿಂಗಳ ಅವಧಿಯಲ್ಲಿ ವಿಕಿಪೀಡೀಯಾದಲ್ಲಿ ಹೆಚ್ಚು ಸರ್ಚ್ ಗೊಳಗಾದ ಕ್ರಿಕೆಟಿಗರು ಯಾರು ಎಂಬ ಪಟ್ಟಿ ಇದೀಗ ಬಹಿರಂಗವಾಗಿದೆ.

ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಮೆಂಟ್ ನಡೆದಿತ್ತು. ಈ ವೇಳೆ ಜನ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದರು.

ಇದೇ ಸಂದರ್ಭದಲ್ಲಿ ಹೆಚ್ಚು ಸರ್ಚ್ ಗೊಳಗಾದ ಟೀಂ ಇಂಡಿಯಾ ಕ್ರಿಕೆಟಿಗರ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಅವರು 5 ಮಿಲಿಯನ್ ಪ್ಲಸ್ ಬಾರಿ ಸರ್ಚ್ ಗೊಳಗಾಗಿದ್ದಾರೆ. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. 4.7 ಮಿಲಿಯನ್ ಬಾರಿ ಅವರ ಹೆಸರನ್ನು ಹುಡುಕಾಟ ಮಾಡಲಾಗಿದೆ.

ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರವಲ್ಲ, ಜಾಗತಿಕವಾಗಿ ಕ್ರೀಡಾಳುಗಳ ಲಿಸ್ಟ್ ನೋಡಿದರೆ ಕೊಹ್ಲಿ, ರೋಹಿತ್ ನಂತರದ ಸ್ಥಾನ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊರದ್ದು. ಅವರ ಹೆಸರನ್ನು 4.4 ಮಿಲಿಯನ್ ಬಾರಿ ಸರ್ಚ್ ಮಾಡಲಾಗಿದೆ. 4.3 ಮಿಲಿಯನ್ ಬಾರಿ ಸರ್ಚ್ ಗೊಳಗಾದ ಮೆಸ್ಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ