ದಾಖಲೆಯ ಹೊಸ್ತಿಲಲ್ಲಿ ಸೂರ್ಯಕುಮಾರ್ ಯಾದವ್

ಭಾನುವಾರ, 26 ನವೆಂಬರ್ 2023 (08:54 IST)
Photo Courtesy: Twitter
ತಿರುನಂತಪುರಂ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ತಿರುವನಂತಪುರಂನ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹೊಸ ದಾಖಲೆಯ ಸನಿಹದಲ್ಲಿದ್ದಾರೆ.

ಕಳೆದ ಪಂದ್ಯದಲ್ಲಿ 41 ಎಸೆತಗಳಿಂದ 80 ರನ್ ಗಳಿಸಿದ್ದ ಸೂರ್ಯ ಪಂದ್ಯ ಶ್ರೇಷ್ಠರಾಗಿದ್ದರು. ಅವರು ಇಂದೂ ಅಂತಹದ್ದೇ ಒಂದು ಸ್ಪೋಟಕ ಬ್ಯಾಟಿಂಗ್ ನಡೆಸಿದರೆ ವಿಶೇಷ ದಾಖಲೆ ಮಾಡಲಿದ್ದಾರೆ.

ಟಿ20 ಕ್ರಿಕೆಟ್ ನಲ್ಲಿ ಸೂರ್ಯ 51 ಇನಿಂಗ್ಸ್ ಗಳಿಂದ 1921 ರನ್ ಗಳಿಸಿದ್ದಾರೆ. ಇನ್ನು 79 ರನ್ ಗಳಿಸಿದರೆ ಅವರು 2000 ರನ್ ಪೂರೈಸಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 2000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟಿಗ ಎಂಬ ದಾಖಲೆ ಮಾಡಲಿದ್ದಾರೆ.

ಇದುವರೆಗೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 56 ಇನಿಂಗ್ಸ್ ಗಳಿಂದ ಈ ದಾಖಲೆ ಮಾಡಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕುವ ಅವಕಾಶ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ