ಭಾರತ ಆಸ್ಟ್ರೇಲಿಯಾ ಪಂದ್ಯಕ್ಕೊಂದು ವಿಶಿಷ್ಟ ತಿರುವು!

ಮಂಗಳವಾರ, 7 ಮಾರ್ಚ್ 2017 (14:20 IST)
ಬೆಂಗಳೂರು:  ಭಾರತ ಭೋಜನ ವಿರಾಮದ ವೇಳೆಗೆ 274 ರನ್ ಗಳಿಗೆ ಆಲೌಟ್ ಆದಾಗ ಮೊದಲ ಪಂದ್ಯದಂತೇ ಈ ಪಂದ್ಯವೂ ಸುಲಭವಾಗಿ ಆಸ್ಟ್ರೇಲಿಯಾ ತೆಕ್ಕೆಗೆ ಜಾರುತ್ತಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಚಹಾ ವಿರಾಮದ ವೇಳೆಗೆ ಪಿಕ್ಚರ್ ಅಬೀ ಬಾಕೀ ಹೇ ಎನ್ನುತ್ತಿದೆ ಟೀಂ ಇಂಡಿಯಾ.

 
ಭಾರತ ನೀಡಿದ 188 ರನ್ ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ ಚಹಾ ವಿರಾಮದ ವೇಳೆಗೆ 6 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಇದರೊಂದಿಗೆ ಪಂದ್ಯ ವಿಶಿಷ್ಟ ತಿರುವು ಪಡೆದುಕೊಂಡಿದೆ. ಇದುವರೆಗೆ ಚೆಂಡು ಆಸ್ಟ್ರೇಲಿಯಾ ಅಂಗಳದಲ್ಲಿತ್ತು. ಆರಂಭದಲ್ಲಿ ಉಮೇಶ್ ಯಾದವ್ 2 ವಿಕೆಟ್ ಕಿತ್ತರು. ಆದರೆ ಚಹಾ ವಿರಾಮಕ್ಕೆ ಮೊದಲು ಅಶ್ವಿನ್ ಉಡಾಯಿಸಿದ ಮ್ಯಾಥ್ಯೂ ವೇಡ್ ರ ಆರನೇ ವಿಕೆಟ್ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದು ನಿಲ್ಲಿಸಿದೆ.

ಗೆಲುವಿಗೆ ಆಸ್ಟ್ರೇಲಿಯಾ ಇನ್ನೂ 87 ರನ್ ಗಳಿಸಬೇಕಾಗಿದೆ. ಪೀಟರ್ ಹ್ಯಾಂಡ್ಸ್ ಕಾಂಬ್ ಬಿಟ್ಟರೆ ಬೇರೆಲ್ಲಾ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿಕೊಂಡಿದ್ದಾರೆ. ಚಹಾ ವಿರಾಮದ ನಂತರ ಭಾರತೀಯ ಬೌಲರ್ ಗಳು ಇದೇ ರೀತಿ ಅದ್ಭುತವಾಗಿ ಬೌಲಿಂಗ್ ಮಾಡಿದರೆ, ಫಲಿತಾಂಶ ಭಾರತದ ಕಡೆಗೆ ವಾಲಲಿದೆ. ಏನಾಗುತ್ತದೋ… ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ