ಬೆಂಗಳೂರು ಟೆಸ್ಟ್`ನಲ್ಲಿ ರಹಾನೆ, ಪೂಜಾರ ದಿಟ್ಟ ಹೋರಾಟ

ಕೃಷ್ಣವೇಣಿ ಕೆ

ಸೋಮವಾರ, 6 ಮಾರ್ಚ್ 2017 (16:37 IST)
ಬೆಂಗಳೂರು: ಭಾರತಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮೊಗದಲ್ಲಿ ಇಂದು ಚಿಂತೆಯ ಗೆರೆ ಕಂಡುಬಂತು. ಕಾರಣ ಟ್ರಕ್ಕಿಂಗ್ ಹೋಗಿ, ಬೆಟ್ಟ ಹತ್ತಿದ ಮೇಲೆ ಟೀಂ ಇಂಡಿಯಾಕ್ಕೆ ಪರಿಸ್ಥಿತಿ ಎಷ್ಟು ಗಂಭೀರ ಎಂದು ಅರಿವಾಯಿತೇನೋ. ಇಂದು ಸಂಪೂರ್ಣವಾಗಿ ಪಂದ್ಯದ ಮೇಲೆ ತನ್ನ ಹಿಡಿತ ಸಾಧಿಸಿತು.


ಮೂರನೇ ದಿನದಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಸರದಿಯಲ್ಲಿ 4ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ. ವಿಶೇಷವಾಗಿ ಭಾರತ ಇಂದು ಆತ್ಮವಿಶ್ವಾಸದಿಂದಲೇ ಇನಿಂಗ್ಸ್ ಆರಂಭಿಸಿತ್ತು. ಸ್ಪಷ್ಟ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆರಂಭಿಕರು 50 ರನ್ ಒಟ್ಟುಗೂಡಿಸುವಲ್ಲಿ ಅಭಿನವ್ ಮುಕುಂದ್ ಪೆವಿಲಿಯನ್ ಸೇರಿಕೊಂಡರು.

ಆದರೂ ಸ್ಥಳೀಯ ಹೀರೋ ಕೆಎಲ್ ರಾಹುಲ್ ಚೇತೇಶ್ವರ ಪೂಜಾರ ಜತೆ ಸೇರಿಕೊಂಡು ಇನಿಂಗ್ಸ್ ಕಟ್ಟಿದರು. ಭಾರತ 126 ಮುನ್ನಡೆ ಸಾಧಿಸಿತು. ಸತತವಾಗಿ ಎರಡು ಪಂದ್ಯಗಳಿಂದ ಮೂರನೇ ಅರ್ಧಶತಕ ದಾಖಲಿಸಿದರು. ದುರಾದೃಷ್ಟವಶಾತ್ ಇಂದೂ ಕೂಡಾ ಶತಕ ದಾಖಲಿಸಲು ವಿಫಲರಾದರು. ಆದರೂ ಆಸೀಸ್ ಬೌಲರ್ ಗಳಿಗೆ ಒತ್ತಡ ತಂದಿಕ್ಕಿದರು. ರವೀಂದ್ರ ಜಡೇಜಾಗೆ ಬ್ಯಾಟಿಂಗ್ ನಲ್ಲಿ ಪ್ರಮೋಷನ್ ಕೊಟ್ಟ ಟೀಂ ಇಂಡಿಯಾ ತಂತ್ರ ಯಶಸ್ವಿಯಾಗಲಿಲ್ಲ.

ವಿರಾಟ್ ಕೊಹ್ಲಿ ಇಂದೂ ಕೂಡಾ ಟಚ್ ನಲ್ಲಿದ್ದಂತೆ ಕಾಣಲಿಲ್ಲ. ಕೇವಲ 15 ರನ್ ಗಳಿಸಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ನಂತರ ಬಂದ ಕೊಹ್ಲಿಯ ಭರವಸೆಯ ಬಂಟ ಅಜಿಂಕ್ಯಾ ರೆಹಾನೆ ಅಂಜಿಕೆಯಿಲ್ಲದೆ ಪೂಜಾರ ಜತೆ ಹೆಜ್ಜೆ ಹಾಕಿದರು. ಇದರ ನಡುವೆ ಪೂಜಾರ 78 ರನ್ ರೆಹಾನೆ 40 ರನ್ ಗಳಿಸಿದರು. ಇವರಿಬ್ಬರು 93 ರನ್ ಗಳ ಜತೆಯಾಟವೇ ಭಾರತದ ಪಾಲಿಗೆ ಭರವಸೆಯ ಬೆಳಕಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ