ಭಾರತ-ದ.ಆಫ್ರಿಕಾ ಟಿ20 ಸರಣಿ ಇಂದಿನಿಂದ
ಈಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದಿರುವ ರೋಹಿತ್ ಪಡೆ ಅದೇ ತಂಡದೊಂದಿಗೆ ಈಗ ದ.ಆಫ್ರಿಕಾ ವಿರುದ್ಧ ಆಡಲಿಳಿಯಲಿದೆ. ಆಸ್ಟ್ರೇಲಿಯಾದಂತೇ ಟೆಂಬಾ ಬವುಮಾ ನೇತೃತ್ವದ ಆಫ್ರಿಕಾ ಪಡೆಯೂ ಕಠಿಣ ಎದುರಾಳಿಯಾಗಿದೆ.
ಹೀಗಾಗಿ ರೋಹಿತ್ ಪಡೆ ಮತ್ತೆ ಸರ್ವಾಂಗೀಣ ಪ್ರದರ್ಶನ ನೀಡುವುದರತ್ತ ಗಮನ ಕೊಡಬೇಕು. ಆಸೀಸ್ ಸರಣಿ ಗೆದ್ದರೂ ಬೌಲಿಂಗ್ ಚಿಂತೆಯ ವಿಷಯವಾಗಿತ್ತು. ಪ್ರಮುಖ ಬೌಲರ್ ಗಳು ವಿಕೆಟ್ ಕೀಳಲು ವಿಫಲವಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ.ಹೀಗಾಗಿ ವಿಶ್ವಕಪ್ ಗೆ ಮುನ್ನ ನಡೆಯಲಿರುವ ಈ ಟಿ20 ಸರಣಿಯಲ್ಲಿ ಭಾರತ ತಂಡ ಬೌಲಿಂಗ್ ಸುಧಾರಿಸುವತ್ತ ಗಮನಹರಿಸಬೇಕಾಗಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.