ತಮಾಷೆಯಾಗಿಯೇ ಸ್ಪಾನ್ಸರ್ ಗಳಿಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ

ಮಂಗಳವಾರ, 27 ಸೆಪ್ಟಂಬರ್ 2022 (16:46 IST)
ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪ್ರಶಸ್ತಿ ಸಮಾರಂಭದಲ್ಲಿ ಪ್ರಾಯೋಜಕರಿಗೆ ಟಾಂಗ್ ಕೊಟ್ಟಿದ್ದಾರೆ.

ಸರಣಿ ಗೆಲುವಿನ ಬಳಿಕ ಆಟಗಾರರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ವೇಳೆ ‘ಎನರ್ಜೆಟಿಕ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಎಂಬ ಪ್ರಶಸ್ತಿಯನ್ನು ಹೊಸದಾಗಿ ಸೇರಿಸಲಾಗಿದೆ. ಈ ಅವಾರ್ಡ್ ವಿರಾಟ್ ಕೊಹ್ಲಿ ಪಾಲಾಗಿದೆ.

ನಿಜ ಹೇಳಬೇಕೆಂದರೆ ಕೊನೆಯ ಪಂದ್ಯದಲ್ಲಿ ಬಿಟ್ಟರೆ ಈ ಸರಣಿಯಲ್ಲಿ ಕೊಹ್ಲಿ ಬ್ಯಾಟ್ ಹೆಚ್ಚು ಸದ್ದು ಮಾಡಿರಲಿಲ್ಲ. ಆದರೂ ಸುಖಾ ಸುಮ್ಮನೇ ಒಂದು ಅವಾರ್ಡ್ ಕೊಟ್ಟಿದ್ದಕ್ಕೆ ಸ್ಪಾನ್ಸರ್ ಗಳಿಗೆ ಕೊಹ್ಲಿ ಟಾಂಗ್ ಕೊಟ್ಟಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಬರುವಾಗ ಮಕ್ಕಳಂತೆ ಓಡಿಕೊಂಡು ಬಂದು ಇಂತಹ ಪ್ರಶಸ್ತಿಗಳ ಪ್ರಾಧಾನ್ಯತೆ ಏನು ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ