ವಿಂಡೀಸ್ ಸರಣಿಗೆ ಎರಡು ದಿನ ಮೊದಲೇ ಗುವಾಹಟಿಗೆ ಬಂದಿಳಿದ ಟೀಂ ಇಂಡಿಯಾ
ನಾಯಕ ವಿರಾಟ್ ಕೊಹ್ಲಿ, ಧೋನಿ, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ನಿನ್ನೆಯಿಂದಲೇ ಇಲ್ಲಿ ಕಠಿಣ ತಾಲೀಮು ಪ್ರಾರಂಭಿಸಿದ್ದಾರೆ.
ಅಕ್ಟೋಬರ್ 21 ರಿಂದ ನವಂಬರ್ 1 ರವರೆಗೆ ಭಾರತ ವಿಂಡೀಸ್ ವಿರುದ್ಧ ಐದು ಏಕದಿನ ಪಂದ್ಯಗಳನ್ನಾಡಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ತೆರಳಲಿದೆ.