ಸೈಕಲ್ ಗ್ಯಾಪಲ್ಲಿ ತವರಿನ ತಂಡಕ್ಕೆ ಉಪಕಾರ ಮಾಡಿದ ಪೃಥ್ವಿ ಶಾ
ವಿಂಡೀಸ್ ವಿರುದ್ಧ ಏಕದಿನ ಸರಣಿಗೆ ಮೊದಲು ಸಿಕ್ಕ ಗ್ಯಾಪ್ ಲ್ಲಿ ತವರು ಮುಂಬೈ ಪರ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ನಲ್ಲಿ ಆಡಿದ ಪೃಥ್ವಿ ಶಾ ಅರ್ಧಶತಕ ಗಳಿಸಿ ಹೈದರಾಬಾದ್ ವಿರುದ್ಧ ಸೆಮಿಫೈನಲ್ ನಲ್ಲಿ ಗೆಲುವಿನ ರೂವಾರಿಯಾದರು.
247 ರನ್ ಗಳ ಗುರಿ ಬೆನ್ನತ್ತಿದ್ದ ಮುಂಬೈ ಪರ ಪೃಥ್ವಿ ಶಾ 60 ರನ್ ಸಿಡಿಸಿದರೆ ಅವರಿಗೆ 55 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು. ಇವರಿಬ್ಬರ 155 ರನ್ ಗಳ ಜತೆಯಾಟದ ನೆರವಿನಿಂದ ಮುಂಬೈ ಸುಲಭವಾಗಿ ಗೆಲುವು ಸಾಧಿಸಿತು.