ಟೀಂ ಇಂಡಿಯಾಕ್ಕೆ ಈಗ ಅನುಭವಿ ಬೌಲರ್ ನ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಅನುಭವಿ ಸ್ಪಿನ್ನರ್ ಇದ್ದಿದ್ದರೆ ಈ ಹಂತದಲ್ಲಿ ಒಂದೆರಡು ವಿಕೆಟ್ ಕಬಳಿಸಿದ್ದರೆ ಟೀಂ ಇಂಡಿಯಾ ಮೇಲುಗೈ ಸಾಧಿಸುತ್ತಿತ್ತು. ಅದರ ನಡುವೆ ಕ್ಯಾಚ್ ಬಿಟ್ಟು ಫೀಲ್ಡಿಂಗ್ ಪ್ರಮಾದವೆಸಗಿದ್ದು ದುಬಾರಿಯಾಗಿದೆ. ಲಬುಶೇನ್ 108 ರನ್ ಗಳಿಸಿ ಔಟಾಗಿದ್ದಾರೆ. ಆದರೆ ನಾಯಕ ಟಿಮ್ ಪೇಯ್ನ್ 38 ರನ್ ಗಳಿಸಿ ಭಾರತದ ಯುವ ಬೌಲಿಂಗ್ ಪಡೆ ಸವಾರಿ ಮಾಡುತ್ತಿದ್ದಾರೆ. ಭಾರತದ ಅನನುಭವವನ್ನು ಆಸ್ಟ್ರೇಲಿಯಾ ಸರಿಯಾಗಿಯೇ ಸದುಪಯೋಗಪಡಿಸಿಕೊಂಡು ಬೃಹತ್ ಮೊತ್ತ ಪೇರಿಸಿದರೆ ಮುಂದೆ ಅದನ್ನು ಚೇಸ್ ಮಾಡುವುದು ಯುವ ಬ್ಯಾಟ್ಸ್ ಮನ್ ಗಳ ಪಡೆಗೆ ಕಷ್ಟವಾಗಲಿದೆ.