ಟೀಂ ಇಂಡಿಯಾವೋ, ಭಾರತ ಎ ತಂಡವೋ! ಎಲ್ಲವೂ ಅಯೋಮಯ!

ಶುಕ್ರವಾರ, 15 ಜನವರಿ 2021 (09:35 IST)
ಬ್ರಿಸ್ಬೇನ್: ಗಾಯದ ಗೂಡಾಗಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಎ ದರ್ಜೆಯ ತಂಡವನ್ನು ಕಣಕ್ಕಿಳಿಸಿದೆ. ಪ್ರಮುಖ ಆಟಗಾರರೆಲ್ಲಾ ಗಾಯದಿಂದಾಗಿ ವಿಶ್ರಾಂತಿಯಲ್ಲಿದ್ದರೆ, ಆಸ್ಟ್ರೇಲಿಯಾವನ್ನು ಎದುರಿಸಲು ಯುವ ಟೀಂ ಕಣಕ್ಕಿಳಿದಿದೆ.


ಭಾರತದ ಪರ ಬೌಲಿಂಗ್ ವಿಭಾಗ ಸಂಪೂರ್ಣ ಹೊಸದಾಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಕೂಡಾ ಗಾಯದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತ ತಂಡ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್, ಟಿ ನಟರಾಜನ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ಇದ್ದಾರೆ. ವಿಶೇಷವೆಂದರೆ ಮೊಹಮ್ಮದ್ ಸಿರಾಜ್ ಬಿಟ್ಟರೆ ಉಳಿದೆಲ್ಲರಿಗೂ ಇದು ಪದಾರ್ಪಣೆಯ ಪಂದ್ಯ. ಸಿರಾಜ್ ಕೂಡಾ ಇದೇ ಸರಣಿಯಲ್ಲೇ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದು! ಭಾರತದ ಪರ ಇಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡಾ ಬೌಲಿಂಗ್ ಒಂದು ಎಸೆತ ಎಸೆದಿದ್ದರು. ಒಟ್ಟಾರೆ ಬೌಲಿಂಗ್ ವಿಭಾಗ ಇಂದು ಸಂಪೂರ್ಣವಾಗಿ ಹೊಸದು.

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಕಳೆದ ಪಂದ್ಯದಲ್ಲಿ ಆಡಿದ್ದ ಹನುಮ ವಿಹಾರಿ ಗಾಯದಿಂದಾಗಿ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಆಲ್ ರೌಂಡರ್ ಸ್ಥಾನ ನಿಭಾಯಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ