ಟೀಂ ಇಂಡಿಯಾ ಸಹಾಯಕ ಕೋಚ್ ಬಳಗದ ಆಯ್ಕೆ ಪ್ರಕ್ರಿಯೆ ಶುರು: ಹೊಸ ನೇಮಕ ಸಾಧ್ಯತೆ ಕಡಿಮೆ

ಮಂಗಳವಾರ, 20 ಆಗಸ್ಟ್ 2019 (10:03 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಮತ್ತೆ ರವಿಶಾಸ್ತ್ರಿಯೇ ಮುಂದುವರಿದಿದ್ದಾರೆ. ಇದೀಗ ಸಹಾಯಕ ಕೋಚ್ ಗಳ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ.


ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ನೇತೃತ್ವದ ಐವರ ಸಮಿತಿ ಸಹಾಯಕ ಕೋಚ್ ಸಿಬ್ಬಂದಿಗಳ ನೇಮಕಾತಿ ನಡೆಸುತ್ತಿದೆ. ಇದಕ್ಕಾಗಿ ನಿನ್ನೆಯಿಂದಲೇ ಆಯ್ಕೆ ಪ್ರಕ್ರಿಯೆ ಶುರು ಮಾಡಿಕೊಂಡಿದೆ. ಗುರುವಾರದ ವೇಳೆಗೆ ಅಂತಿಮ ಪ್ರಕಟಣೆ ನೀಡುವ ನಿರೀಕ್ಷೆಯಿದೆ.

ಈಗಾಗಲೇ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಆರ್ ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರೂ ರವಿಶಾಸ್ತ್ರಿಯ ಮೆಚ್ಚಿನ ಆಯ್ಕೆ. ಹೀಗಾಗಿ ಇವರೇ ಮತ್ತೆ ಆ ಸ್ಥಾನದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಆದರೆ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಹೊಸಬರ ನೇಮಕವಾಗುವ ಸಾಧ್ಯತೆಯಿದೆ. ಅವರು ಯಾರು ಎನ್ನುವುದಷ್ಟೇ ಕುತೂಹಲ ಬಾಕಿ ಉಳಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ