ಹಾರ್ದಿಕ್ ಪಾಂಡ್ಯ ಜತೆಗೆ ಸ್ನೇಹ ಕಡಿದುಕೊಂಡರಾ ಕೆಎಲ್ ರಾಹುಲ್?

ಮಂಗಳವಾರ, 20 ಆಗಸ್ಟ್ 2019 (09:45 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಹಿಂದೊಮ್ಮೆ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿ ನಿಷೇಧಕ್ಕೊಳಗಾಗಿದ್ದು ಎಲ್ಲರಿಗೂ ಗೊತ್ತೇ ಇದೆ.


ಈ ಘಟನೆಯ ಬಳಿಕ ಹಾರ್ದಿಕ್ ಜತೆಗೆ ಅದೇ ಸ್ನೇಹ ಉಳಿಸಿಕೊಂಡಿದ್ದಾರಾ ಕೆಎಲ್ ರಾಹುಲ್? ಈ ಪ್ರಶ್ನೆಗೆ ಅವರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

‘ಆ ಘಟನೆ ನಂತರ ನಾವಿಬ್ಬರೂ ನಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದೆವು. ಹೊರಗಿನ ಪ್ರಪಂಚದಿಂದ ದೂರವಿದ್ದೆವು. ಹಾರ್ದಿಕ್ ಅವನ ಕುಟುಂಬದ ಜತೆಗೆ ಕಾಲ ಕಳೆದ. ನಾನು ನ‍ನ್ನ ಕುಟುಂಬದೊಂದಿಗೆ ಕಾಲ ಕಳೆದೆ. ಅದಾದ ಬಳಿಕ ತನಿಖೆಯ ಸಂದರ್ಭದಲ್ಲಿ ನಾವಿಬ್ಬರೂ ಈ ಬಗ್ಗೆ ಸಾಕಷ್ಟು ಮಾತಾಡಿಕೊಂಡೆವು. ಬಳಿಕ ಇ‍ಬ್ಬರೂ ಅದರಿಂದ ಹೊರಬಂದೆವು. ಈಗಲೂ ನಾವು ಉತ್ತಮ ಸ್ನೇಹಿತರಾಗಿಯೇ ಇದ್ದೇವೆ. ಈ ಘಟನೆ ನಮ್ಮ ಸ್ನೇಹವನ್ನು ಹಾಳು ಮಾಡಲಿಲ್ಲ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ