ತಿಂಗಳ ಬ್ರೇಕ್ ನಂತರ ಟೀಂ ಇಂಡಿಯಾ ಮ್ಯಾಚ್ ಟೈಮ್: ಭಾರತ-ವಿಂಡೀಸ್ ಮೊದಲ ಟೆಸ್ಟ್

ಬುಧವಾರ, 12 ಜುಲೈ 2023 (08:10 IST)
ಡೊಮಿನಿಕಾ: ಬರೋಬ್ಬರಿ ಒಂದು ತಿಂಗಳ ಬ್ರೇಕ್ ಬಳಿಕ ಟೀಂ ಇಂಡಿಯಾ ಆಟಗಾರರು ಇಂದಿನಿಂದ ಹೊಸ ಸವಾಲಿಗೆ ರೆಡಿಯಾಗಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕಳೆದ ಬಾರಿ ಟೆಸ್ಟ್ ಚಾಂಪಿಯನ್ ಶಿಪ್ ಸೋಲು ಟೀಂ ಇಂಡಿಯಾ ಆಟಗಾರರನ್ನು ಕಂಗೆಡಿಸಿತ್ತು. ಆದರೆ ಆ ಕಹಿ ನೆನಪುಗಳೆಲ್ಲಾ ಮರೆತು ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಟೀಂ ಇಂಡಿಯಾ ಈ ಬಾರಿ ಅನುಭವಿ ಮತ್ತು ಅನನುಭವಿಗಳ ಗೂಡಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್, ಕೊಹ್ಲಿ, ರೆಹಾನೆ ಅನುಭವಿಗಳಾದರೆ, ಬೌಲಿಂಗ್ ಸಂಪೂರ್ಣ ಯುವ ಪಡೆಯಾಗಿದೆ. ಪ್ರಮುಖರ ಅನುಪಸ್ಥಿತಿಯಲ್ಲಿ ಯುವ ಪಡೆ ಹೇಗೆ ಎದುರಾಳಿಗಳನ್ನು ಕಟ್ಟಿಹಾಕುತ್ತದೆಂದು ನೋಡಬೇಕಿದೆ.

ಅತ್ತ ವೆಸ್ಟ್ ಇಂಡೀಸ್ ಕೂಡಾ ಈ ಸರಣಿಗೆ ಸಂಪೂರ್ಣ ಯುವಕರ ಪಡೆಯನ್ನೇ ಆಯ್ಕೆ ಮಾಡಿದೆ. ಕ್ರಯಾಗ್ ಬ್ರಾತ್ ವೈಟ್ ನೇತೃತ್ವದ ವಿಂಡೀಸ್ ಗೆ ಭಾರತದಂತಹ ಬಲಿಷ್ಠ ತಂಡವನ್ನು ಕಟ್ಟಿಹಾಕುವುದು ಸುಲಭವಲ್ಲ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ