ವಿರಾಟ್ ಕೊಹ್ಲಿ 100 ನೇ ಟೆಸ್ಟ್ ಗೆ ತಕ್ಕ ಉಡುಗೊರೆ ನೀಡಲು ಸಜ್ಜಾಗಿರುವ ಟೀಂ ಇಂಡಿಯಾ

ಗುರುವಾರ, 3 ಮಾರ್ಚ್ 2022 (08:50 IST)
ಮೊಹಾಲಿ: ಇಲ್ಲಿ ಶ್ರೀಲಂಕಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯ. ಈ ಸ್ಮರಣೀಯ ಗಳಿಗೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಟೀಂ ಇಂಡಿಯಾ ಕ್ರಿಕೆಟಿಗರು ತಯಾರಾಗಿದ್ದಾರಂತೆ.

ಟೀಂ ಇಂಡಿಯಾ ಉಪ ನಾಯಕ ಜಸ್ಪ್ರೀತ್ ಬುಮ್ರಾ ಈಗಾಗಲೇ ಕೊಹ್ಲಿಯ ಮೈಲಿಗಲ್ಲಿನ ಪಂದ್ಯವನ್ನು ಸ್ಮರಣೀಯವಾಗಿಸಲು ಪಣ ತೊಟ್ಟಿದ್ದಾರೆ.

ಈ ಪಂದ್ಯವನ್ನು ಗೆದ್ದು ಕೊಹ್ಲಿಗೆ ಉಡುಗೊರೆಯಾಗಿ ನೀಡುವುದೇ ಟೀಂ ಇಂಡಿಯಾ ಕ್ರಿಕೆಟಿಗರ ಗುರಿಯಂತೆ. ಇಷ್ಟು ವರ್ಷ ತಂಡಕ್ಕಾಗಿ ಆಡಿ, ನಾಯಕನಾಗಿ ತಂಡವನ್ನು ಮುನ್ನಡೆಸಿದ ಕ್ರಿಕೆಟಿಗನಿಗೆ ಸೂಕ್ತ ಗೌರವ ನೀಡಲು ಸಹ ಕ್ರಿಕೆಟಿಗರು ನಿರ್ಧರಿಸಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ