ಶುಭಮನ್ ಗಿಲ್ ಹೆಸರಿಗೆ, ರೋಹಿತ್ ರಿಯಲ್ ಕ್ಯಾಪ್ಟನ್: ಈ ವಿಡಿಯೋವೇ ಸಾಕ್ಷಿ

Sampriya

ಶನಿವಾರ, 25 ಅಕ್ಟೋಬರ್ 2025 (17:15 IST)
Photo Credit X
ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ಪಂದ್ಯಾಟದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟ ಪ್ರಮುಖ ಪಾತ್ರ ವಹಿಸಿದೆ. ಇನ್ನೂ ತಂಡದ ಕ್ಯಾಪ್ಟನ್ ಶುಭಮನ್ ಗಿಲ್ ಆಗಿದ್ದರು, ರಿಯಲ್ ಕ್ಯಾಪ್ಟನ್‌ ಆಗಿದ್ದು ರೋಹಿತ್ ಶರ್ಮಾ ಎಂಬ ಮಾತು ವ್ಯಕ್ತವಾಗುತ್ತಿದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕೂಡಾ ಸಾಕ್ಷಿಯಂತಾಗಿದೆ. 

ತಂಡದ ಕ್ಯಾಪ್ಟನ್ ಆಗದಿದ್ದರು ರೋಹಿತ್ ಶರ್ಮಾ ಫೀಲ್ಡಿಂಗ್ ಸಂದರ್ಭದಲ್ಲಿ ಬೌಲರ್ ರಾಣಾಗೆ ನೀಡಿದ ಮಾರ್ಗದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಆಸ್ಟ್ರೇಲಿಯಾ ವಿಕೆಟ್ ಕಬಳಿಸಲು ರಾಣಾಗೆ ರೋಹಿತ್ ಶರ್ಮಾ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ರಾಣಾ ವಿಕೆಟ್‌ ಅನ್ನು ಕಬಳಿಸಿದರು.   ಇದು ರೋಹಿತ್ ಶರ್ಮಾ ನಾಯಕತ್ವದ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿದೆ. 

ಶುಭ್ಮನ್ ಗಿಲ್‌ ತಂಡದ ಕ್ಯಾಪ್ಟನ್ ಆಗಿದ್ದು, ಆದರೆ ರೋಹಿತ್ ಅವರು ತಮ್ಮ ತಂತ್ರಗಾರಿಕೆಯನ್ನು ಸಹ ಆಟಗಾರರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ತಂಡ ಜಯದ ದಾರಿಯನ್ನು ಹಿಡಿದಿದೆ.

ಈ ಹಿಂದಿನ ಪಂದ್ಯಾಟದಲ್ಲೂ ರೋಹಿತ್ ಶರ್ಮಾ ಇದೇ ನಡೆಯನ್ನು ಪ್ರದರ್ಶಿಸಿದ್ದಾರೆ. 



Sunil Gavaskar said????️: Rohit Sharma is a proper tactical genius. It's not easy to win 2 ICC trophies within 9 months. Rohit did it with his captaincy. BCCI selectors are going to regret their decision. (Fox Cricket) pic.twitter.com/qWPbpxF4M0

— ???????????????????????????????? (@ImHydro45) October 25, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ