ಭಾರತ-ಇಂಗ್ಲೆಂಡ್ ನಾಲ್ಕನೇ ಟಿ20 ಇಂದು: ಒತ್ತಡದಲ್ಲಿ ಟೀಂ ಇಂಡಿಯಾ
ಭಾರತಕಕ್ಕಿರುವ ದೊಡ್ಡ ತಲೆನೋವು ಬ್ಯಾಟಿಂಗ್. ಅದರಲ್ಲೂ ಈ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಆರಂಭಿಕರ ವಿಚಾರದಲ್ಲಿ ಪ್ರಯೋಗ ನಡೆಯುತ್ತಲೇ ಇದೆ. ಆದರೆ ಎಲ್ಲರೂ ವಿಫಲರಾಗಿ ಭಾರತವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುತ್ತಿದ್ದಾರೆ. ಕೊಹ್ಲಿ ಫಾರ್ಮ್ ಗೆ ಬಂದಿರುವುದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಆದರೆ ಉಳಿದವರಿಂದ ಸ್ಥಿರ ಪ್ರದರ್ಶನ ಬರಬೇಕಿದೆ. ಇಲ್ಲದೇ ಹೋದರೆ ಭಾರತಕ್ಕೆ ಇಂದೂ ಗೆಲ್ಲುವುದು ಅಸಾಧ್ಯವಾಗಿದೆ.