ಏಷ್ಯನ್ ಗೇಮ್ಸ್ ನಲ್ಲಿ ಟೀಂ ಇಂಡಿಯಾಗೆ ನಾಳೆ ಮೊದಲ ಪಂದ್ಯ

ಸೋಮವಾರ, 2 ಅಕ್ಟೋಬರ್ 2023 (17:02 IST)
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಈಗಾಗಲೇ ಚಿನ್ನದ ಪದಕ ಗೆದ್ದುಕೊಟ್ಟಿದೆ. ಇದೀಗ ಪುರುಷರ ಸರದಿ.

ಇಂದು ನೇಪಾಳ ವಿರುದ್ಧ ಟೀಂ ಇಂಡಿಯಾ ಪುರುಷರ ತಂಡ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಲಿದೆ. ಟೂರ್ನಿಯಲ್ಲಿ ಪ್ರಬಲ ತಂಡವಾಗಿರುವ ಭಾರತಕ್ಕೆ ಋತುರಾಜ್ ಗಾಯಕ್ ವಾಡ್ ನಾಯಕತ್ವ ವಹಿಸಿಕೊಂಡಿದ್ದಾರೆ. ಉಳಿದಂತೆ ಯುವ ಆಟಗಾರರೇ ತಂಡದಲ್ಲಿದ್ದಾರೆ.

ಕೊಂಚ ಅನುಭವಿಗಳೆಂದರೆ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ನಾಯಕ ಋತುರಾಜ್ ಗಾಯಕ್ ವಾಡ್, ಅರ್ಷ್ ದೀಪ್ ಸಿಂಗ್, ದೀಪಕ್ ಹೂಡಾ, ವಾಷಿಂಗ್ಟನ್‍ ಸುಂದರ್ ಮುಂತಾದ ಆಟಗಾರರು. ಹ್ಯಾಂಗ್ ಝೂನ ಚಿಕ್ಕ ಮೈದಾನದ ಬಗ್ಗೆ ಈಗಾಗಲೇ ಟೀಕೆಗಳು ಕೇಳಿಬಂದಿತ್ತು. ಇಲ್ಲಿ ಭಾರತದ ಈ ಹೊಡೆಬಡಿಯ ಆಟಗಾರರು ದಾಖಲೆಗಳ ಸುರಿಮಳೆ ಮಾಡುವುದು ಖಚಿತ.  ಅತ್ತ ನೇಪಾಳ ತಂಡ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಇದೀಗ ಭಾರತದಂತಹ ಬಲಿಷ್ಠ ತಂಡವನ್ನು ಹೇಗೆ ಎದುರಿಸಲಿದೆ ನೋಡಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ನಾಳೆ ಬೆಳಿಗ್ಗೆ 6.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ