ಏಷ್ಯನ್ ಗೇಮ್ಸ್: ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ 9 ಪದಕ, ಶೂಟಿಂಗ್ ನಲ್ಲಿ 22 ಪದಕ
ಪುರುಷರ ಶಾಟ್ ಪುಟ್ ಎಸೆತ ಸ್ಪರ್ಧೆಯಲ್ಲಿ ತೇಜೀಂದರ್ ಪಾಲ್ ತೂರ್ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಕಳೆದ 2018 ರ ಏಷ್ಯಾಡ್ ನಲ್ಲೂ ಅವರು ಚಿನ್ನ ಗೆದ್ದಿದ್ದರು. ಪುರುಷರ 1,500 ಮೀ. ರೇಸ್ ನಲ್ಲಿ ಭಾರತ ಬೆಳ್ಳಿ ಮತ್ತು ಕಂಚು ಎರಡನ್ನೂ ಗೆದ್ದುಕೊಂಡಿದೆ. ಲಾಂಗ್ ಜಂಪ್ ನಲ್ಲಿ ಶ್ರೀಶಂಕರ್ ರಜತ ಪದಕ ಗೆದ್ದರು. ಮಹಿಳೆಯರ 100 ಮೀ. ಹರ್ಡಲ್ಸ್ ನಲ್ಲಿ ಜ್ಯೋತಿ ಯರ್ರಾಜಿ ಬೆಳ್ಳಿ ಪದಕ ಗೆದ್ದುಕೊಂಡರು.
ಶೂಟಿಂಗ್ ನಲ್ಲಿ ಭಾರತ ತಂಡ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ಟ್ರ್ಯಾಪ್ ತಂಡ ಚಿನ್ನದ ಪದಕ ಗೆದ್ದುಕೊಂಡರು. ಇಂದೂ ಭಾರತೀಯ ಕ್ರೀಡಾಪಟುಗಳು ಬ್ಯಾಡ್ಮಿಂಟನ್, ಕುದುರೆ ಸವಾರಿ, ಬಿಲ್ಗಾರಕೆ, ಅಥ್ಲೆಟಿಕ್ಸ್ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.