ಗೆಲುವಿನೊಂದಿಗೆ ವರ್ಷಕ್ಕೆ ವಿದಾಯ ಹೇಳಲಿರುವ ಟೀಂ ಇಂಡಿಯಾ

ಬುಧವಾರ, 20 ಡಿಸೆಂಬರ್ 2017 (13:03 IST)
ಕಟಕ್: ಭಾರತ ತಂಡ ವರ್ಷದ ಕೊನೆಯ ಟಿ20 ಸರಣಿಯನ್ನು ಗೆಲುವಿನ ಮೂಲಕ ವಿದಾಯ ಹೇಳಲು ಅಣಿಯಾಗಿದೆ. ಇಂದು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ.
ಪ್ರಚಲಿತವಾಗಿ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಬಲಿಷ್ಠವಾಗಿರುವ ಭಾರತ ಕ್ರಿಕೆಟ್ ತಂಡದ ಜವಾಬ್ದಾರಿ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರ ಮೇಲಿದೆ. ಅನೇಕ ಯುವ ಪ್ರತಿಭೆಗಳು ತಂಡದಲಿದ್ದು ತಮ್ಮ ಪ್ರತಿಭೆಗಳನ್ನು ತೋರಿಸಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.
 
ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-0 ಯಲ್ಲಿ ಹಾಗೂ ಏಕದಿನ ಸರಣಿಯನ್ನು 2-1 ರಲ್ಲಿ ಜಯಿಸಿದ ಭಾರತ ತಂಡ, ಟಿ20 ಸರಣಿಯಲ್ಲೂ ಬಗ್ಗು ಬಡಿದು, ಶ್ರೀಲಂಕಾ ತಂಡದ ಭಾರತ ಪ್ರವಾಸವನ್ನು ಕ್ಲೀನ್‌ಸ್ವೀಪ್ ಮಾಡುವ ತವಕದಲ್ಲಿದೆ. ಇಂದಿನ ಬಾರಾಬತಿ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡಲಿದೆ. ಭಾರತ, ಶ್ರೀಲಂಕಾ ವಿರುದ್ಧ ಆಡಿದ 11 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 7 ಗೆಲುವು ಹಾಗೂ 4 ಸೋಲು ಕಂಡಿದೆ.
 
ಏಕದಿನ ಸರಣಿಯಲ್ಲಿ ಆಯ್ಕೆಗಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದ ಕರ್ನಾಟಕದ ಕೆ ಎಲ್ ರಾಹುಲ್, ಇಂದು ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನೋರ್ವ ಕರ್ನಾಟಕದ ಆಟಗಾರರಾದ ಮನೀಷ್ ಪಾಂಡೆ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಶ್ರೇಯಸ್ ಅಯ್ಯರ್ ಅವರು ಕೂಡಾ ತಂಡವನ್ನು ಸೇರಿಕೊಂಡಿದ್ದಾರೆ. ಬಸಿಲ್ ಥಂಪಿ, ಜೈದೇವ್ ಉನದ್ಕತ್, ಮೊಹಮದ್ ಸಿರಾಜ್ ತಂಡವನ್ನು ಸೇರಿಕೊಂಡಿದ್ದು ಇವರಲ್ಲಿ ಒಬ್ಬರು ಬೌಲಿಂಗ್‌ನಲ್ಲಿ ಬುಮ್ರಾ ಅವರಿಗೆ ಸಾಥ್ ನೀಡಲಿದ್ದಾರೆ.
 
ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಸೋತ ಶ್ರೀಲಂಕಾ ತಂಡ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ.
 
ಬಾರಾಬತಿ ಕ್ರೀಡಾಂಗಣದಲ್ಲಿ 2015 ರಲ್ಲಿ ಆಡಿದ ಏಕೈಕ ಟಿ20 ಪಂದ್ಯವನ್ನು ಭಾರತ ದಕ್ಷಿಣ ಆಫ್ರಿಕ ವಿರುದ್ಧ ಸೋಲುಂಡಿತ್ತು.
 
ಪಂದ್ಯ ಆರಂಭ: ಸಂಜೆ 7.00
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ