ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾ
ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳಲಿರುವ ಟೀಂ ಇಂಡಿಯಾ ಇದಕ್ಕೆ ಮೊದಲು ಕೌಂಟಿ ತಂಡಗಳ ಎದುರು ಟಿ20 ಅಭ್ಯಾಸ ಪಂದ್ಯವಾಡಲಿದೆ.
ಕಳೆದ ವರ್ಷ ಕೊರೋನಾದಿಂದಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಭಾರತಕ್ಕೆ ಕೊನೆಯ ಪಂದ್ಯವಾಡಲು ಸಾಧ್ಯವಾಗಿರಲಿಲ್ಲ. ಈ ಉಳಿದ ಪಂದ್ಯ ಜುಲೈ 1 ರಿಂದ ಆರಂಭವಾಗಲಿದೆ. ಇದಾದ ಬಳಿಕ ಟಿ20 ಮತ್ತು ಏಕದಿನ ಸರಣಿಯನ್ನೂ ಆಡಲಿದೆ.