ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಟೀಂ ಇಂಡಿಯಾ ವಿಶ್ವ ನಂ.1

ಶನಿವಾರ, 17 ಜೂನ್ 2017 (08:44 IST)
ಲಂಡನ್: ನಾಳೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತದ ಪಾಲಿಗೆ ಎಲ್ಲಾ ರೀತಿಯಿಂದಲೂ ಮಹತ್ವದ್ದು. ನಾಳೆ ನಡೆಯಲಿರುವ ಪಂದ್ಯ ಗೆದ್ದರೆ, ಟೀಂ ಇಂಡಿಯಾಗೆ ನಂ.1 ಆಗಿ ಮೆರೆಯುವ ಅವಕಾಶ.

 
ಸದ್ಯಕ್ಕೆ ಐಸಿಸಿ ಶ್ರೇಯಾಂಕದಲ್ಲಿ ಭಾರತ ದ್ವಿತೀಯ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿರುವ ದ. ಆಫ್ರಿಕಾ ತಂಡಕ್ಕಿಂತ ಕೇವಲ 1 ಅಂಕ ಕಡಿಮೆಯಿದೆ. ಹೀಗಾಗಿ ನಾಳಿನ ಪಂದ್ಯ ಗೆದ್ದರೆ ಭಾರತಕ್ಕೆ ಆ ಅಂಕ ಲಭಿಸುವುದರೊಂದಿಗೆ ನಂ.1 ಸ್ಥಾನ ಗಳಿಸಲಿದೆ.

ಮೊದಲೇ ಪಾಕಿಸ್ತಾನದೊಂದಿಗೆ ಸೆಣಸುತ್ತಿರುವ ಒತ್ತಡ. ಅದರ ಜತೆಗೆ ಗೆಲ್ಲಲೇಬೇಕಾದ ಒತ್ತಡ. ಟೀಂ ಇಂಡಿಯಾ ಮತ್ತು ನಾಯಕ ಇಬ್ಬರೂ ನಂ.1 ಸ್ಥಾನದಲ್ಲಿ ಕೂರುವ ಸದವಕಾಶವನ್ನು ಉಳಿಸಿಕೊಳ್ಳಬೇಕಾದರೆ ಭಾರತ ಗೆಲ್ಲಲೇಬೇಕು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ