ಪವರ್ ಪ್ಲೇಯಲ್ಲಿ ಪವರ್ ಫುಲ್ ಬೌಲಿಂಗ್: ಗೆದ್ದ ಟೀಂ ಇಂಡಿಯಾ

ಭಾನುವಾರ, 10 ಜುಲೈ 2022 (08:10 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 49 ರನ್ ಗಳ ಭರ್ಜರಿ ಗೆಲುವು ಕಂಡಿದೆ.

ಮೊದಲ ಪಂದ್ಯವನ್ನು ಗೆದ್ದಿದ್ದ ಟೀಂ ಇಂಡಿಯಾ ಈಗ ಎರಡನೇ ಪಂದ್ಯದಲ್ಲೂ ಬೌಲರ್ ಗಳಿಂದಾಗಿ ಗೆಲುವು ಸಾಧಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ರೋಹಿತ್ ಶರ್ಮಾ 31, ರಿಷಬ್ ಪಂತ್ 26, ರವೀಂದ್ರ ಜಡೇಜಾ ಔಟಾಗದೇ 46 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಭುವನೇಶ್ವರ್ ಕುಮಾರ್ ಆರಂಭದಲ್ಲೇ ಆಘಾತವಿಕ್ಕಿದರು. ಜೇಸನ್ ರಾಯ್ ಶೂನ್ಯ ಸುತ್ತಿದರೆ ನಾಯಕ ಜೋಸ್ ಬಟ್ಲರ್ 4 ರನ್ ಗೆ ಔಟಾದರು. ಡೇವಿಡ್ ಮಲನ್ 19, ಲಿಯಾಮ್ ಲಿವಿಂಗ್ ಸ್ಟೋನ್ 15, ಮೊಯಿನ್ ಅಲಿ 35, ಡೇವಿಡ್ ವಿಲ್ಲೇ ಅಜೇಯ 33 ರನ್ ಗಳಿಸಿದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ನಡೆಸಿದ ಭುವನೇಶ್ವರ್ ಕುಮಾರ್ ಪ್ರಮುಖ ಮೂರು ವಿಕೆಟ್ ಕಿತ್ತರು. ಅವರಿಗೆ ತಕ್ಕ ಸಾಥ್ ನೀಡಿದ ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್ ತಲಾ 2, ಹಾರ್ದಿಕ್ ಪಾಂಡ್ಯ, ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ಗೆ ಬರ್ಮಿಂಗ್ ಹ್ಯಾಮ್ ನೆಲದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಸೋಲಾಯಿತು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಪಂದ್ಯದಲ್ಲಿ ಸತತ 14 ನೇ ಗೆಲುವು ಕಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ