ಮೂರನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ ನೆರವಾದ ಆ ಮೂರು ಮಂದಿ!

ಗುರುವಾರ, 8 ಫೆಬ್ರವರಿ 2018 (08:47 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 124 ರನ್ ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿದೆ.
 

ಟೀಂ ಇಂಡಿಯಾಗೆ ಈ ಗೆಲುವು ತಂದಿತ್ತವರು ಪ್ರಮುಖವಾಗಿ ಮೂರು ಮಂದಿ. ಅವರೆಂದರೆ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್,  ಯಜುವೇಂದ್ರ ಚಾಹಲ್. ಕೊಹ್ಲಿ ಒಬ್ಬರ ಬ್ಯಾಟಿಂಗ್ ಹೊರತುಪಡಿಸಿದ್ದರೆ ಟೀಂ ಇಂಡಿಯಾ ಬ್ಯಾಟಿಂಗ್ ಕಳಪೆಯಾಗಿತ್ತು. ಚಾಹಲ್-ಯಾದವ್ ಸ್ಪಿನ್ ಜೋಡಿ10 ರಲ್ಲಿ 8 ವಿಕೆಟ್ ತಮ್ಮದಾಗಿಸಿಕೊಂಡಿತು. ಹೀಗಾಗಿ ಈ ಮೂವರು ಆಟಗಾರರದ್ದೇ ಪ್ರಧಾನ ಪಾತ್ರವಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿತು. ವಿರಾಟ್ ಕೊಹ್ಲಿಗೆ ಇತ್ತೀಚೆಗೆ ರನ್ ಗಳಿಸುವುದೆಂದರೆ ನೀರು ಕುಡಿದಷ್ಟೇ ಸುಲಭವೇನೋ ಎನ್ನುವಂತೆ ಆಡಿದರು. 12 ಬೌಂಡರಿ 2 ಸಿಕ್ಸರ್ ಸಹಿತ 160 ರನ್ ಚಚ್ಚಿದರು. ಇದು ಅವರ 34 ನೇ ಏಕದಿನ ಶತಕವಾಗಿತ್ತು. ಆರಂಭಿಕ ಶಿಖರ್ ಧವನ್ ಇವರಿಗೆ 76 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ಮೊತ್ತ ಬೆನ್ನತ್ತಿದ್ದ ಆಫ್ರಿಕನ್ನರಿಗೆ ಮತ್ತೆ ಚಾಹಲ್-ಯಾದವ್ ಸ್ಪಿನ್ ಜೋಡಿ ಬೆಂಡೆತ್ತಿತ್ತು. ಇವರಿಬ್ಬರು ತಲಾ 4 ವಿಕೆಟ್ ಹಂಚಿಕೊಂಡರು. ಅಂತಿಮವಾಗಿ ಆಫ್ರಿಕಾ 40 ಓವರ್ ಗಳಲ್ಲಿ 179 ರನ್ ಗಳಿಗೆ ಆಲೌಟ್ ಆಯಿತು. ಜೆಪಿ ಡುಮಿನಿ ಮಾತ್ರ ಕೊಂಚ ಪ್ರತಿರೋಧ ತೋರಿ 51 ರನ್ ಗಳಿಸಲು ಯಶಸ್ವಿಯಾದರು. ಅಂತೂ ಹ್ಯಾಟ್ರಿಕ್ ಗೆಲುವು ಟೀಂ ಇಂಡಿಯಾ ಪಾಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ