ಟೀಂ ಇಂಡಿಯಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪಾಕಿಸ್ತಾನ ನಾಯಕ ಸರ್ಫ್ರಾಜ್ ಅಹ್ಮದ್

ಶುಕ್ರವಾರ, 21 ಸೆಪ್ಟಂಬರ್ 2018 (07:21 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಿರಬಹುದು. ಆದರೆ ಇದು ನಮಗೆ ಒಳ್ಳೆಯದೇ ಆಯಿತು. ಮುಂದೆ ಎಚ್ಚೆತ್ತುಕೊಳ್ಳಲು ಅವಕಾಶ ಸಿಕ್ಕಿದಂತಾಗಿದೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫ್ರಾಜ್ ಅಹ್ಮದ್ ಹೇಳಿದ್ದಾರೆ.

ಆ ಮೂಲಕ ಲೀಗ್ ಪಂದ್ಯದಲ್ಲಿ ಸೋತರೂ ಮಹತ್ವದ ಪಂದ್ಯದಲ್ಲಿ ಭಾರತ ಎದುರಾದರೆ ಪೈಪೋಟಿ ನೀಡುವ ಎಚ್ಚರಿಕೆ ನೀಡಿದ್ದಾರೆ. ಈ ಸೋಲಿನಿಂದ ನಮ್ಮ ಸಾಮರ್ಥ್ಯ ಅಳೆಯಲಾಗದು. ಮುಂದಿನ ಪಂದ್ಯಗಳಲ್ಲಿ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತೇವೆ ಎಂದು ಅಹ್ಮದ್ ಹೇಳಿಕೊಂಡಿದ್ದಾರೆ.

ಹಿಂದೆ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲೂ ಭಾರತ ಲೀಗ್ ಹಂತದಲ್ಲಿ ಪಾಕ್ ತಂಡವನ್ನು ಸದೆಬಡಿದಿತ್ತು. ಆದರೆ ಫೈನಲ್ ನಲ್ಲಿ ಎಡವಿತ್ತು. ಈಗಲೂ ಅದೇ ಪುನರಾವರ್ತನೆ ಮಾಡುವ ಎಚ್ಚರಿಕೆಯನ್ನು ಪಾಕ್ ನಾಯಕ ಪರೋಕ್ಷವಾಗಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ