ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ 26 ರನ್ ಗಳ ಪ್ರಯಾಸಕರ ಗೆಲುವು ಸಾಧಿಸಿದೆ.
ಹಾಂಗ್ ಕಾಂಗ್ ಕ್ರಿಕೆಟ್ ಶಿಶು ಎಂಬ ಹಣೆ ಪಟ್ಟಿ ಹೊಂದಿದ್ದರೂ ಟೀಂ ಇಂಡಿಯಾ ಎದುರು ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಭಾರತ ನೀಡಿದ 286 ರನ್ ಗಳ ಗುರಿ ಬೆನ್ನತ್ತಿದ್ದ ಹಾಂಗ್ ಕಾಂಗ್ ಆರಂಭಿಕ ನಿಝಾಕತ್ ಖಾನ್ ರ 92 ಮತ್ತು ನಾಯಕ ಅಂಶುಮಾನ್ ರಾಥ್ ಅವರ 72 ರನ್ ಗಳ ಸಹಾಯದಿಂದ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಲು ಶಕ್ತವಾಯಿತು.
ಹಾಂಗ್ ಕಾಂಗ್ ನ ಅಪಾಯ ತಂದೊಡ್ಡಿತ್ತು. ಆದರೆ ಚೊಚ್ಚಲ ಪಂದ್ಯವಾಡುತ್ತಿರುವ ಖಲೀಲ್ ಮೊಹಮ್ಮದ್ ಮತ್ತು ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಮತ್ತು ಕುಲದೀಪ್ ಯಾದವ್ 2 ವಿಕೆಟ್ ಕಿತ್ತು ಗೆಲುವು ತಮ್ಮದಾಗಿಸಿದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಕನ್ನಡಿಗ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆಗೆ ಅವಕಾಶ ನೀಡಲಿಲ್ಲ. ಬಹುಶಃ ಇಂದು ಪಾಕಿಸ್ತಾನದ ವಿರುದ್ಧದ ಮಹತ್ವದ ಪಂದ್ಯಕ್ಕೆ ರಾಹುಲ್ ಅವಕಾಶ ಪಡೆಯುವ ಸಾಧ‍್ಯತೆಯಿದೆ. ಹೀಗಾಗಿ ಇದು ಕನ್ನಡಿಗರಿಲ್ಲದ ಟೀಂ ಇಂಡಿಯಾವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.