ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಗೆದ್ದ ಟೀಂ ಇಂಡಿಯಾ

ಸೋಮವಾರ, 21 ನವೆಂಬರ್ 2016 (12:41 IST)
ವಿಶಾಖಪಟ್ಟಣಂ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 246 ರನ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ರಿಂದ ಮುನ್ನಡೆ ಸಾಧಿಸಿದೆ.

ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿದ್ದರೂ ಇಂಗ್ಲೆಂಡ್ ಆಟಗಾರರು ಮೇಲು ಗೈ ಸಾಧಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 405 ರನ್ನುಗಳನ್ನು ಬೆನ್ನತ್ತಿ ಕೇವಲ 158 ಕ್ಕೆ ಆಲೌಟ್ ಆಯಿತು.

ಇಂಗ್ಲೆಂಡ್ ಆರಂಭದಲ್ಲಿ ಅಲೆಸ್ಟರ್ ಕುಕ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಉತ್ತಮ ಆಟವಾಡಲಿಲ್ಲ. ಅಂತಿಮವಾಗಿ ವಿಕೆಟ್ ಕೀಪರ್ ಬೇರ್ ಸ್ಟೋ 34 ರನ್ ಗಳಿಸಿ ಅಜೇಯರಾಗುಳಿದರು. ಭಾರತದ ಪರ ಚೊಚ್ಚಲ ಪಂದ್ಯವಾಡಿರುವ ಜಯಂತ್ ಯಾದವ್ ಇಂದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮೂರು ವಿಕೆಟ್ ಕಿತ್ತರು. ಅವರಿಗೆ ಉಳಿದ ಬೌಲರ್ ಗಳೂ ಸಾಥ್ ನೀಡಿದರು. ಅಶ್ವಿನ್ ಈ ಪಂದ್ಯದಲ್ಲಿ ಒಟ್ಟಾರೆ ಎಂಟು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ