ಮೂಗೂತಿ ಸುಂದರಿ ಸಾನಿಯಾ ಮಿರ್ಜಾ ತಾಯಿಯಾಗಲಿದ್ದಾಳೆ

ಗುರುವಾರ, 16 ಏಪ್ರಿಲ್ 2015 (16:12 IST)
ದೇಶ ಕಂಡ ಪ್ರತಿಭಾವಂತ ಆಟಗಾರ್ತಿಯಾದ ಸಾನಿಯಾ ಮಿರ್ಜಾ ಅದೃಷ್ಟ ಖುಲಾಯಿಸಿದೆ. ವಿಶ್ವ ಡಬಲ್ಸ್ ಟೆನಿಸ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದು ಸಂತಸದಲ್ಲಿರುವಾಗಲೇ ಮತ್ತೊಂದು ಸಂತಸದ ಸುದ್ದಿ ಹೊರಬಂದಿದೆ. ಅದೆಂದರೆ ಸಾನಿಯಾ ಮಮ್ಮಿಯಾಗುತ್ತಿದ್ದಾರಂತೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ಅವರನ್ನು ವಿವಾಹವಾಗಿದ್ದ ಸಾನಿಯಾ ದಾಂಪತ್ಯದಲ್ಲಿ ಕಲಹ ಉಂಟಾಗಿದೆ ಎನ್ನುವ ವರದಿಗಳು ಹಬ್ಬಿದ್ದವು. ಇದೀಗ ಉಹಾಪೋಹ ವರದಿಗಳಿಗೆ ಫುಲ್‌ಸ್ಟಾಪ್‌ ದೊರೆತಂತಾಗಿದೆ. ಶೀಘ್ರದಲ್ಲಿಯೇ ನಾನು ತಂದೆಯಾಗುತ್ತಿದ್ದೇನೆ ಎಂದು ಮಲಿಕ್ ಟ್ವೀಟ್ ಮಾಡಿದ್ದಾರೆ.

28 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ ತಮ್ಮ ಜೊತೆಗಾರ್ತಿ ಮಾರ್ಟಿನ್ ಹಿಂಗಿಸ್ ಅವರೊಂದಿಗೆ ಡಬಲ್ಸ್ ಪಂದ್ಯಾವಳಿಯಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಮತ್ತು ಎಕಾಟರಿನಾ ಮಕರೋವಾ ವಿರುದ್ಧ ಜಯಗಳಿಸಿ ವಿಶ್ವ ಡಬಲ್ಸ್ ಟೆನಿಸ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿದ್ದರು.   

ಸಾನಿಯಾ ಮಿರ್ಜಾ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ಟೆನಿಸ್ ಆಟಗಾರರು ಸಂಭ್ರಮಿಸಿದ್ದರು.

ಕಳೆದ 2010ರಲ್ಲಿ ದಾಂಪತ್ಯ ಜೀವನಕ್ಕೆ ಸಾನಿಯಾ- ಶೋಯಬ್ ಕಾಲಿಟ್ಟಿದ್ದರು. ನಾನು ಆಕೆಯ ನಂಬರ್ ಒನ್ ಫ್ಯಾನ್ ಎಂದು ಮಲಿಕ್ ಸಂತಸ ವ್ಯಕ್ತಪಡಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ