ಟೆಸ್ಟ್ ಕ್ರಿಕೆಟ್ ನಲ್ಲಿ ಲೋ ಸ್ಕೋರಿಂಗ್ ಪಂದ್ಯಗಳೇ ಹೆಚ್ಚಾಗ್ತಿದೆ

ಸೋಮವಾರ, 17 ಜನವರಿ 2022 (08:50 IST)
ಮುಂಬೈ: ಟೆಸ್ಟ್ ಕ್ರಿಕೆಟ್ ಎಂದರೆ ಶತಕ, ದ್ವಿಶತಕ ಗಳಿಸುವುದು, ತಂಡವೊಂದು 500 ಪ್ಲಸ್ ರನ್ ಗಳಿಸುವುದು ಮಾಮಾಲಾಗಿತ್ತು. ಅದರಲ್ಲೂ ವಿಶ್ವದ ಕೆಲವು ಪಿಚ್ ಗಳು ಸಪಾಟೆ ಪಿಚ್ ಗಳೆಂದೇ ಹೆಸರು ವಾಸಿಯಾಗಿತ್ತು.

ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಟೆಸ್ಟ್ ಕ್ರಿಕೆಟ್ ಬೌಲರ್ ಗಳ ಪಂದ್ಯವಾಗಿ ಬದಲಾಗುತ್ತಿದೆ. ಬೌಲರ್ ಗಳೇ ಮೆರೆದಾಡುತ್ತಿದ್ದಾರೆ. ಬ್ಯಾಟಿಗರು ರನ್ ಗಳಿಸಲು ಪರದಾಡುತ್ತಿದ್ದಾರೆ. ಒಂದು ಇನಿಂಗ್ಸ್ ನಲ್ಲಿ 300 ರನ್ ಬಂದರೆ ಅದೇ ದೊಡ್ಡ ಮೊತ್ತ ಎನ್ನುವ ಸ್ಥಿತಿಯಾಗಿದೆ.

ಇದಕ್ಕೆ ಕಾರಣ ಟೆಸ್ಟ್ ಕ್ರಿಕೆಟ್ ಆಡುವ ಗುಣ ಮಟ್ಟ ನಶಿಸಿಹೋಗುತ್ತಿರುವುದು, ಟಿ20 ಅಬ್ಬರದಿಂದಾಗಿ ಟೆಸ್ಟ್ ಕ್ರಿಕೆಟ್ ನ್ನೂ ಬೇಗನೇ ಮುಗಿಸುವ ಧಾವಂತದಿಂದ ಬೌನ್ಸಿ, ಟರ್ನಿಂಗ್ ಪಿಚ್ ಗಳನ್ನೇ ತಯಾರು ಮಾಡುತ್ತಿರುವುದು. ಹೀಗಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಸಾಂಪ್ರದಾಯಿಕ ಆಟ ಎನ್ನುವುದು ಮರೆತು ಹೋಗುತ್ತಿದೆ. ಹೆಚ್ಚಿನ ಪಂದ್ಯಗಳೂ ಥ್ರಿಲ್ಲಿಂಗ್ ಪಂದ್ಯವಾಗುತ್ತಿದೆ. ಇದರಿಂದ ಸಾಂಪ್ರದಾಯಿಕ ಕ್ರೀಡೆಗೆ, ಅದರ ವೈಭವಕ್ಕೆ ಕುಂದುಂಟಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ