ಏಷ್ಯಾಕಪ್ ಗೆಲುವು ಪಾಕಿಸ್ತಾನಕ್ಕೆ ನಾವು ನೀಡುವ ಉತ್ತಮ ಉತ್ತರವಾಗಿತ್ತು ಎಂದು ಕ್ರಿಕೆಟಿಗ ತಿಲಕ್ ವರ್ಮಾ ಹೇಳಿದರು.
ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ತಿಲಕ್ ಬ್ಯಾಟಿಂಗ್ ಪ್ರದರ್ಶನ ಪ್ರಮುಖವಾಗಿತ್ತು.
ತಿಲಕ್ ಅವರು ಅಜೇಯ 69 ರನ್ ಗಳಿಸಿ ಕಳೆದ ಭಾನುವಾರ ದುಬೈನಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭಾರತ ಐದು ವಿಕೆಟ್‌ಗಳ ಜಯ ಸಾಧಿಸಿತು.
ಪಾಕ್ ನೀಡಿದ ಸಾಧರಣ ಗುರಿಯನ್ನು ಬೆನ್ನಟ್ಟುವಾಗ ಆರಂಭದಲ್ಲೇ ಎಡವಿದ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದು ತಿಲಕ್ ವರ್ಮಾಗೆ ತುಂಬಾನೇ ಚಾಲೆಂಜಿಂಗ್ ಸಮಯವಾಗಿತ್ತು. ಕೊನೆಗೆ ಭಾರತ, ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿತು.
ತಿಲಕ್ ವರ್ಮಾ ಈ ಗೆಲುವಿನ ಸಂಬಂಧ ಪ್ರತಿಕ್ರಿಯಿಸಿ, ನಾನು ನನ್ನ ದೇಶವನ್ನು ಎಲ್ಲಕ್ಕಿಂತ ಮುಂದಿಟ್ಟಿದ್ದೇನೆ ಮತ್ತು ದೇಶಕ್ಕಾಗಿ ಪಂದ್ಯವನ್ನು ಗೆಲ್ಲಲು ನಾನು ಬಯಸುತ್ತೇನೆ. ಆ ಸಮಯದಲ್ಲಿ ನಾನು ಒತ್ತಡಕ್ಕೆ ಮಣಿದರೆ ನಾನು ನನ್ನ ಮತ್ತು ದೇಶದ 140 ಕೋಟಿ ಜನರನ್ನು ನಿರಾಸೆಗೊಳಿಸುತ್ತೇನೆ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ.
"ನಾನು ಯುವ ಕ್ರಿಕೆಟಿಗನಾಗಿ ನನ್ನ ತರಬೇತುದಾರರಿಂದ ಕಲಿತ ಮೂಲಭೂತ ಅಂಶಗಳನ್ನು ನಂಬಿದ್ದೇನೆ ಮತ್ತು ಅದನ್ನು ಕಾರ್ಯಗತಗೊಳಿಸಿದೆ. ಪಾಕಿಸ್ತಾನಿಗಳಿಗೆ ಈ ಪಂದ್ಯವನ್ನು ಗೆಲ್ಲುವ ಮೂಲಕನೇ ಉತ್ತರ ಕೊಡಬೇಕೆಂಬುದು ತಿಳಿದಿತ್ತು ಎಂದರು.
ನಾವು ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡೆವು ಮತ್ತು ವಿಷಯಗಳು ಸ್ವಲ್ಪ ಬಿಸಿಯಾಗಿದ್ದವು. ನಾನು ಸಾಮಾನ್ಯಕ್ಕಿಂತ ಸ್ವಲ್ಪ ಮುಂಚಿತವಾಗಿ ಬ್ಯಾಟಿಂಗ್‌ಗೆ ಬಂದೆ. ಆದರೆ ನಾನು ಏನನ್ನೂ ಹೇಳಲಿಲ್ಲ ಅಥವಾ ತಂಡ ಮತ್ತು ದೇಶವನ್ನು ನಿರಾಸೆಗೊಳಿಸುವಂತೆ ದುಡುಕಿನ ಹೊಡೆತವನ್ನು ಆಡಲಿಲ್ಲ ಎಂದು ಅವರು ಹೇಳಿದರು.