1983ರಲ್ಲಿ ಇದೇ ದಿನದಂದು ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆದ್ದ ಸಂಭ್ರಮ

ಶನಿವಾರ, 25 ಜೂನ್ 2016 (19:07 IST)
1983ರ ಜೂನ್ 25 ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಮಹತ್ವದ ದಿನವಾಗಿ ಉಳಿದಿದೆ. ಇಂದು ಭಾರತದ ಪ್ರಥಮ ವಿಶ್ವಕಪ್ ಜಯದ 33ನೇ ವರ್ಷಾಚರಣೆಯಾಗಿದೆ. ಭಾರತ ಅದಾದ ಮೇಲೆ 50 ಓವರುಗಳು ಮತ್ತು ಟಿ 20 ವಿಶ್ವಕಪ್ ಗೆಲುವು ಗಳಿಸಿದ್ದರೂ ಕೂಡ 1983ರ ಗೆಲುವು ಒಂದನೇ ನಂಬರ್ ಸ್ಥಾನಮಾನವನ್ನು ಉಳಿಸಿಕೊಂಡಿದೆ.

ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸಾಧಾರಣ ಮೊತ್ತವನ್ನು ರಕ್ಷಿಸಿಕೊಂಡ ಕಪಿಲ್ ದೇವ್ ಸಾರಥ್ಯದ ತಂಡ ವಿರೋಚಿತ ಹೋರಾಟದ ಮೂಲಕ ಇತಿಹಾಸವನ್ನು ಸೃಷ್ಟಿಸಿತು. 
 
ಮೋಹಿಂದರ್ ಅಮರನಾಥ್ ಆಲ್‌ರೌಂಡ್ ಪ್ರದರ್ಶನದಿಂದ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.  
ಸಂಕ್ಷಿಪ್ತ ಸ್ಕೋರು: ಭಾರತ 54.4 ಓವರುಗಳಲ್ಲಿ 183( ಕ್ರಿಸ್ ಶ್ರೀಕಾಂತ್ 38, ಮೊಹಿಂದರ್ ಅಮರನಾಥ್ 26, ಆಂಡಿ ರೋಬರ್ಟ್ಸ್ 3/32, ಮಾಲ್ಕಮ್ ಮಾರ್ಶಲ್ 2/24, ಹೋಲ್ಡಿಂಗ್ 2/ 26) ವೆಸ್ಟ್ ಇಂಡೀಸ್ ತಂಡವನ್ನು 52 ಓವರುಗಳಲ್ಲಿ 140 ರನ್‌ಗೆ ಆಲೌಟ್ ಮಾಡಿ ( ರಿಚರ್ಡ್ಸ್ 33, ಡ್ಯುಜೋನ್ 25, ಅಮರನಾಥ್ 3/12, ಮದನ್ ಲಾಲ್ 3/ 21)  43 ರನ್‌ಗಳಿಂದ ಗೆಲುವು ಗಳಿಸಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ