ಐಪಿಎಲ್: ಹೈದರಾಬಾದ್ ಗೆ ಶಿಖರ್ ಧವನ್ ನಾಯಕರಾದರೆ ವಿರಾಟ್ ಕೊಹ್ಲಿಗೆ ಸಿಗಲಿದೆ ಈ ಹೆಗ್ಗಳಿಕೆ!
ಗುರುವಾರ, 29 ಮಾರ್ಚ್ 2018 (09:53 IST)
ಮುಂಬೈ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳಿಗೆ ಭಾರತೀಯರೇ ನಾಯಕರಾಗಿದ್ದಾರೆ. ಉಳಿದೊಂದು ತಂಡ ಹೈದರಾಬಾದ್ ಗೂ ಭಾರತೀಯ ಆಟಗಾರನೇ ನಾಯಕನಾಗುವ ಸಂಭವ ಕಂಡುಬರುತ್ತಿದೆ. ಹೀಗಾದರೆ ಟೀಂ ಇಂಡಿಯಾ ನಾಯಕ ಹಾಗೂ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅದೇನದು?
ಈಗಾಗಲೇ ರಾಜಸ್ಥಾನ್ ರಾಯಲ್ಸ್ ನಾಯಕತ್ವ ತ್ಯಜಿಸಿದ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಬದಲಿಗೆ ಟೀಂ ಇಂಡಿಯಾದ ಅಜಿಂಕ್ಯಾ ರೆಹಾನೆ ನಾಯಕರಾಗಿದ್ದಾರೆ. ಹೈದರಾಬಾದ್ ತಂಡಕ್ಕೆ ಮಾತ್ರ ಡೇವಿಡ್ ವಾರ್ನರ್ ರೂಪದಲ್ಲಿ ವಿದೇಶೀ ಮೂಲದ ನಾಯಕರಿದ್ದರು. ಆದರೆ ಅವರೂ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಟೀ ಇಂಡಿಯಾ ಆರಂಭಿಕ ಶಿಖರ್ ಧವನ್ ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಇದು ನಿಜವೇ ಆದರೆ ಎಲ್ಲಾ ಐಪಿಎಲ್ ತಂಡಕ್ಕೂ ಇದೇ ಮೊದಲ ಬಾರಿಗೆ ಭಾರತೀಯರೇ ನಾಯಕರಾಗಲಿದ್ದಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾ ಪರ ತಮ್ಮ ನಾಯಕತ್ವದಲ್ಲಿ ಆಡುವ ಆಟಗಾರರೇ ವಿರಾಟ್ ಕೊಹ್ಲಿಗೆ ಎದುರಾಳಿ ನಾಯಕರಾಗಿ ಲಭ್ಯವಾಗಲಿದ್ದಾರೆ. ಇದೊಂಥರಾ ಆರ್ ಸಿಬಿಗೆ ಹೆಗ್ಗಳಿಕೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ