ನ್ಯೂಜಿಲೆಂಡ್ ವಿರುದ್ಧ ಟೂರ್ನಿಯಲ್ಲಿ ಧೋನಿಗೆ 3 ದಾಖಲೆ ಮುರಿಯುವ ಅವಕಾಶ

ಶನಿವಾರ, 9 ಜುಲೈ 2016 (17:10 IST)
ಭಾರತದ ಸೀಮಿತ ಓವರುಗಳ ನಾಯಕ ಎಂಎಸ್ ಧೋನಿ ಅವರಿಗೆ ಗುರುವಾರ 35 ವರ್ಷ ತುಂಬಿದೆ. ವಿರಾಟ್ ಕೊಹ್ಲಿ ಅವರ  ತಂಡ ವೆಸ್ಟ್ ಇಂಡೀಸ್ ಪ್ರಯಾಣ ಮಾಡಿರುವ ನಡುವೆ ಧೋನಿಗೆ ವಿರಾಮ ಸಿಕ್ಕಿದೆ. ನ್ಯೂಜಿಲೆಂಡ್ ತಂಡ ಭಾರತಕ್ಕೆ ಅಕ್ಟೋಬರ್‌ನಲ್ಲಿ ಐದು ಪಂದ್ಯಗಳ ಸರಣಿಗಾಗಿ ಪ್ರವಾಸ ಕೈಗೊಳ್ಳಲಿದ್ದು ಧೋನಿಯ ಮುಂದಿನ ಕಾರ್ಯಭಾರ ಆರಂಭವಾಗಲಿದೆ.
 
ಜಿಂಬಾಬ್ವೆ ಪ್ರವಾಸದ ಬಳಿಕ ಅಂತಿಮವಾಗಿ ಅವರು ಪ್ರಥಮ ಬಾರಿ ಮೈದಾನಕ್ಕೆ ಇಳಿದಾಗ ಅನೇಕ ದಾಖಲೆಗಳನ್ನು ಮುರಿಯುವ ಅವಕಾಶ ಧೋನಿಗೆ ಒದಗಿಬರಲಿದೆ. ಟೀಂ ಇಂಡಿಯಾದ ನಾಯಕ ಮುರಿಯುವ ಅಂಚಿನಲ್ಲಿರುವ ಮೂರು ದಾಖಲೆಗಳು ಕೆಳಗಿವೆ
 ರಿಕಿ ಪಾಂಟಿಂಗ್ ಮತ್ತು ಧೋನಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಾರಥ್ಯ ವಹಿಸಿದ್ದಾರೆ. ಇವರಿಬ್ಬರೂ ತಮ್ಮ ದೇಶಗಳಿಗೆ ತಲಾ 324 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು,  ಸಮ-ಸಮವಾಗಿದ್ದಾರೆ.

 ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತೀ ಶ್ರೇಷ್ಟ ಏಕದಿನ ನಾಯಕನಾಗಲು ಕೇವಲ ಒಂದು ಗೆಲುವು ಮಾತ್ರ ಬೇಕಾಗಿದೆ. ಪಾಂಟಿಂಗ್ 165 ಜಯಗಳೊಂದಿಗೆ ಪಟ್ಟಿಯಲ್ಲಿ ಮುಂದಿದ್ದರೆ ಧೋನಿ ಮತ್ತು ಅಲೆನ್ ಬಾರ್ಡರ್ ತಲಾ 107 ಜಯಗಳನ್ನು ಗಳಿಸಿದ್ದಾರೆ. ಪುನಃ ಅತೀ ಹೆಚ್ಚು ಏಕದಿನ ಸಿಕ್ಸರುಗಳನ್ನು (123) ಹೊಡೆದ ದಾಖಲೆ ಆಸ್ಟ್ರೇಲಿಯಾ ಪಾಂಟಿಂಗ್ ಹೆಸರಿನಲ್ಲಿದೆ. ಧೋನಿ 121 ಸಿಕ್ಸರುಗಳನ್ನು ಸಿಡಿಸಿದ್ದು ಇನ್ನು ಮೂರು ಸಿಕ್ಸರುಗಳು ಮಾತ್ರ ಬಾಕಿವುಳಿದಿದೆ.
 
ಕಿವೀಸ್ ವಿರುದ್ಧ ಸರಣಿ ಬಳಿಕ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯತ್ತ ಧೋನಿ ಕಣ್ಣು ಹರಿಸಲಿದ್ದಾರೆ. ಧೋನಿಯ ನಿವೃತ್ತಿ ಸುತ್ತ ಅನೇಕ ಪ್ರಶ್ನೆಗಳು ಆವರಿಸಿರುವ ನಡುವೆ ದೋನಿ ಕ್ರಿಕೆಟ್‌ ತ್ಯಜಿಸುವ ಯಾವುದೇ ಲಕ್ಷಣ ಕಂಡುಬಂದಿಲ್ಲ. ಉತ್ತಮ ಫಿಟ್ನೆಸ್ ಹೊಂದಿರುವ ಧೋನಿ ತನ್ನ ಟೀಕಾಕಾರರಿಗೆ ಬಾಯಿಮುಚ್ಚಿಸಲು ಕೆಲವು ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಬೇಕಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ