ಟ್ರೆವರ್ ಬೇಲಿಸ್ ಇಂಗ್ಲೆಂಡ್ ತಂಡದ ಹೊಸ ಕೋಚ್

ಮಂಗಳವಾರ, 26 ಮೇ 2015 (19:04 IST)
ಅನೇಕ ವಾರಗಳ ಊಹಾಪೋಹಗಳಿಗೆ ತೆರೆ ಎಳೆದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಂಗಳವಾರ ಇಂಗ್ಲೆಂಡ್ ತಂಡದ ಹೊಸ ಕೋಚ್ ಹುದ್ದೆಗೆ ಟ್ರೆವರ್ ಬೇಲಿಸ್ ಅವರ ಆಯ್ಕೆಯನ್ನು ಖಚಿತಪಡಿಸಿದೆ.  ಟ್ವಿಟರ್ ಅಧಿಕೃತ ಖಾತೆ ಮೂಲಕ ಇಸಿಬಿ ಈ ಸುದ್ದಿಯನ್ನು ಖಚಿತಪಡಿಸಿದೆ. 
 
ಟ್ರೆವರ್ ಕೋಚ್ ಹುದ್ದೆಯಲ್ಲಿ ಗಣನೀಯ ದಾಖಲೆ ಹೊಂದಿದ್ದಾರೆ. ಅವರು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಳ್ಳೆಯ ಸಾಧನೆ ಮಾಡಿದ್ದು, ಎಲ್ಲಾ ಮಾದರಿ ಆಟಗಳಲ್ಲಿ ಗೆಲುವಿನ ತಂಡಗಳನ್ನು ನಿರ್ಮಿಸುವುದು ಹೇಗೆಂದು ಅರಿತಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ನಿರ್ದೇಶಕ ಆಂಡ್ರಿವ್ ಸ್ಟ್ರಾಸ್ ತಿಳಿಸಿದ್ದಾರೆ. 
 
ನಾವು ಮುಂದಿನ ನಾಲ್ಕು ವರ್ಷಗಳಲ್ಲಿ ಮೂರು ಪ್ರಮುಖ ಐಸಿಸಿ ಪಂದ್ಯಾವಳಿಗಳನ್ನು  ಆಡುತ್ತಿರುವುದರಿಂದ ಕಿರು ಮಾದರಿ ಆಟಗಳಲ್ಲಿ ಅವರ ತಜ್ಞತೆ ಮುಖ್ಯವಾಗಿದೆ ಎಂದು ಸ್ಟ್ರಾಸ್ ಹೇಳಿದ್ದಾರೆ. 2016ರಲ್ಲಿ ಭಾರತದಲ್ಲಿ ಐಸಿಸಿ ವಿಶ್ವ ಟಿ 20,  2017 ಮತ್ತು 2019ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ  ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಆಡಲಿರುವುದಾಗಿ ಅವರು ಹೇಳಿದರು. 
 
52 ವರ್ಷ ವಯಸ್ಸಿನ ಬೇಲಿಸ್ ನ್ಯೂ ಸೌತ್ ವೇಲ್ಸ್ ತಂಡವು ಎರಡು ದೇಶೀಯ ಮೊದಲ ದರ್ಜೆ ಶೆಫೀಲ್ಡ್ ಶೀಲ್ಡ್ ಪ್ರಶಸ್ತಿಗಳನ್ನು ಗೆಲ್ಲಲು ಮಾರ್ಗದರ್ಶನ ಮಾಡಿದ್ದಾರೆ ಮತ್ತು ಶ್ರೀಲಂಕಾ 2011 ವಿಶ್ವ ಕಪ್ ಫೈನಲ್ ಹಂತ ತಲುಪಿದಾಗ ಅವರು ಶ್ರೀಲಂಕಾ ಕೋಚ್ ಆಗಿದ್ದರು. 

ವೆಬ್ದುನಿಯಾವನ್ನು ಓದಿ