ತ್ರಿಕೋನ ಸರಣಿ: ಮಾಯಾಂಕ್ ಆಕರ್ಷಕ ಶತಕ, ಭಾರತ ಎಗೆ ಜಯ

ಸೋಮವಾರ, 10 ಆಗಸ್ಟ್ 2015 (14:41 IST)
ಓಪನರ್ ಮಾಯಾಂಕ್ ಅಗರವಾಲ್ ನಾಯಕ ಉನ್‌ಮುಕ್ತ್ ಚಾಂದ್ ಜೊತೆ ಆಕರ್ಷಕ 130 ರನ್ ಶತಕ ಮತ್ತು ದಕ್ಷಿಣ ಆಫ್ರಿಕಾ ಎ ಆಟಗಾರರ ಅಸ್ವಸ್ಥತೆಯ ನೆರವಿನೊಂದಿಗೆ ಭಾರತ ಎ ದಕ್ಷಿಣ ಆಫ್ರಿಕಾ ಎ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. 245 ರನ್ ಗುರಿಯನ್ನು ಬೆನ್ನತ್ತಿದ ಭಾರತ ಎ 37.4 ಓವರುಗಳಲ್ಲಿ ಗುರಿಯನ್ನು ಮುಟ್ಟಿ ಗೆಲುವಿನ ನಗೆ ಬೀರಿತು.

ಅಗರವಾಲ್ ಮತ್ತು ಚಾಂದ್ ನಡುವೆ  219 ರನ್ ಆರಂಭಿಕ ಜತೆಯಾಟವು ಗೆಲುವಿಗೆ ನೆರವಾಯಿತು. ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಎ ಪರ ಕ್ವಿಂಟನ್ ಡಿ ಕಾಕ್ ಅವರ 108 ರನ್ ನೆರವಿನಿಂದ 50 ಓವರುಗಳಲ್ಲಿ 244 ರನ್ ಬಾರಿಸಿದರು. ಮಧ್ಯಮ ವೇಗಿ ರಿಷಿ ಧವನ್ ನಾಲ್ಕು ವಿಕೆಟ್ ಕಬಳಿಸಿದರು. 
 
ಆದರೆ ಭಾರತ ಎ ತಂಡಕ್ಕೆ ಸ್ಟಾರ್ ಆಟಗಾರ ಮಾಯಾಂಕ್ ಅಗರವಾಲ್.  122 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 130 ರನ್ ಬಾರಿಸಿದರು. ಬಿಸಿಲಿನ ತಾಪದಿಂದ ಆಯಾಸಗೊಂಡ ಅಗರವಾಲ್ ಔಟಾದಾಗ,ಭಾರತಕ್ಕೆ ಗೆಲ್ಲುವುದಕ್ಕೆ 2 ರನ್ ಮಾತ್ರ ಅಗತ್ಯವಿತ್ತು. ಚಾಂದ್ ಅವರು ಅರ್ಧಶತಕ ಬಾರಿಸಿದರಾದರೂ ಎಲ್ಗಾರ್ ಬೌಲಿಂಗ್‍‌ನಲ್ಲಿ ಎಲ್‌ಬಿಗೆ ಬಲಿಯಾಗಿ 90 ರನ್‌ಗೆ ಔಟಾದರು.

ಭಾರತದ ಪರ ರಿಶಿ ಧವನ್ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಶ್ರೇಷ್ಟ ಬೌಲರ್ ಎನಿಸಿದರು. ಉಳಿದಂತೆ ಸಂದೀಪ್ ಶರ್ಮಾ 2 ವಿಕೆಟ್ ಮತ್ತು ಧವಲ್ ಕುಲಕರ್ಣಿ, ಕರಣ್ ಶರ್ಮಾ, ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಗಳಿಸಿದರು. ದಕ್ಷಿಣ ಆಫ್ರಿಕಾ ಎ ಪರ ಕ್ವಿಂಟನ್ ಡಿ ಕಾಕ್ ಅವರ 108 ರನ್ ಮತ್ತು ಡೇನ್ ವಿಲಾಸ್ ಅವರ 50 ರನ್ ಹೊರತುಪಡಿಸಿ ಉಳಿದಂತೆ ಯಾರೂ ಅಷ್ಟೊಂದು ಚೆನ್ನಾಗಿ ಆಡಲಿಲ್ಲ. 
 

ವೆಬ್ದುನಿಯಾವನ್ನು ಓದಿ