ಅಂಪಾಯರ್ ಜತೆ ಅನುಚಿತವಾಗಿ ವರ್ತಿಸಿದರೆ ಕ್ರಿಕೆಟಿಗರಿಗೆ ಕಾದಿದೆ ಗ್ರಹಚಾರ!

ಮಂಗಳವಾರ, 7 ಮಾರ್ಚ್ 2017 (11:13 IST)
ಲಂಡನ್: ಅಂಪಾಯರ್ ಗಳ ಜತೆ ಇನ್ನು ಮುಂದೆ ಕ್ರಿಕೆಟಿಗರು ಮೈದಾನದಲ್ಲಿ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುವುದಿಲ್ಲ. ಹಾಗೇನಾದರೂ ಮಾಡಿದರೆ, ಅದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ.

 
ಕ್ರಿಕೆಟ್ ಸಮಿತಿ ಅಕ್ಟೋಬರ್ 1, 2017 ರಿಂದ ಹೊಸ ಕಾನೂನೊಂದನ್ನು ತರಲಿದೆ. ಅದರಂತೆ ಅಂಪಾಯರ್ ಜತೆ ವಾಗ್ವಾದಕ್ಕಿಳಿಯುವುದೂ ಸೇರಿದಂತೆ ಅನುಚಿತವಾಗಿ ವರ್ತಿಸಿದರೆ ಮೈದಾನದಿಂದ ಹೊರಗೆ ಕಳುಹಿಸುವುದೂ ಸೇರಿದಂತೆ ಗಂಭೀರ ಶಿಕ್ಷೆ ವಿಧಿಸುವ ಅಧಿಕಾರ ಸಿಗಲಿದೆ.

ಇದಲ್ಲದೆ ರನೌಟ್ ನಿರ್ಣಯದ ಕುರಿತಾಗಿಯೂ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಕ್ರಿಕೆಟ್ ಸಮಿತಿ ಚಿಂತನೆ ನಡೆಸಿದೆ. ಇದರಿಂದಾಗಿ ಅಂಪಾಯರ್ ಗಳಿಗೆ ಹೆಚ್ಚಿನ ಅಧಿಕಾರ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ