ಭಾರತ ಟಿ20 ಸರಣಿ ಸೋಲಿಗೆ ಅಂಪಾಯರ್ ಕೂಡಾ ಕಾರಣ!

ಸೋಮವಾರ, 11 ಫೆಬ್ರವರಿ 2019 (09:24 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಸೋಲಲು ಅಂಪಾಯರ್ ಮಾಡಿದ ಒಂದು ನಿರ್ಧಾರವೂ ಕಾರಣವಾಗಿತ್ತು!


ಅಂತಿಮ ಪಂದ್ಯದಲ್ಲಿ ಗೆಲುವಿಗೆ 213 ರನ್ ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಕ್ಕೆ ಅಂತಿಮ ಓವರ್ ನಲ್ಲಿ ಗೆಲ್ಲುವ ಅವಕಾಶವಿತ್ತು. ಪಂದ್ಯ ರೋಚಕವಾಗಿತ್ತು. ಈ ಪಂದ್ಯವನ್ನು ಭಾರತ ಕೇವಲ 4 ರನ್ ಗಳಿಂದ ಸೋತು, ಸರಣಿ ಕಳೆದುಕೊಂಡಿತು. ಆದರೆ ಅದಕ್ಕೆ ಅಂತಿಮ ಓವರ್ ನಲ್ಲಿ ನಡೆದ ಎರಡು ತಪ್ಪುಗಳು ಕಾರಣವಾದವು.

ಅಂತಿಮ ಓವರ್ ನ ಎರಡನೇ ಎಸೆತ ವೈಡ್ ಆಗಿದ್ದರೂ ಅಂಪಾಯರ್ ವೈಡ್ ತೀರ್ಪು ನೀಡದೇ ಭಾರತಕ್ಕೆ ಒಂದು ಎಸೆತ ಮತ್ತು ರನ್ ನಷ್ಟವಾಯಿತು. ಈ ಮೂಲಕ ಅಂಪಾಯರ್ ಖಳನಾಯಕರಾದರು. ಮೂರನೇ ಎಸೆತದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‍ ಮನ್ ದಿನೇಶ್ ಕಾರ್ತಿಕ್ ಒಂದು ರನ್ ತೆಗೆಯುವ ಅವಕಾಶವಿದ್ದರೂ ತಾವೇ ಗೆಲುವಿನ ರನ್ ಹೊಡೆಯುವ ಆತುರದಲ್ಲಿ ರನ್ ತೆಗೆಯದೇ ಇನ್ನೊಂದು ತುದಿಯಲ್ಲಿದ್ದ ಕೃನಾಲ್ ರನ್ನು ಹಿಂದಕ್ಕೆ ಕಳುಹಿಸಿದರು. ಬಹುಶಃ ಈ ಎರಡು ಎಸೆತಗಳಲ್ಲಿ ರನ್ ಬಂದಿದ್ದರೆ ಭಾರತ ಗೆಲ್ಲಬಹುದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ