ನಂಬಿದ್ರೆ ನಂಬಿ ಬಿಟ್ರೆ ಬಿಡಿ: ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮಹಿಳಾ ಕ್ರಿಕೆಟ್ ತಾರೆ

ಭಾನುವಾರ, 21 ಆಗಸ್ಟ್ 2016 (15:08 IST)
ದಕ್ಷಿಣ ಆಫ್ರಿಕಾದ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಸುನ್ನೆಟ್ಟೆ ವಿಲಿಜಿಯೋನ್, ರಿಯೋ ಒಲಿಂಪಿಕ್ಸ್‌ನ ಮಹಿಳಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 

ದಕ್ಷಿಣ ಆಫ್ರಿಕಾ ತಂಡದ ಒಂದು ಟೆಸ್ಟ್ ಮತ್ತು 17 ಏಕದಿನ ಪಂದ್ಯಗಳನ್ನಾಡಿದ್ದ ಸುನ್ನೆಟ್ಟೆ ವಿಲಿಜಿಯೋನ್, ಚಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 66.18 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದಿದ್ದಾರೆ. ಕ್ರೋವೇಷಿಯಾದ ಸಾರಾ ಕೊಲಾಕ್  64.92 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದಿದ್ದಾರೆ.
 
ಸುನ್ನೆಟ್ಟೆ ವಿಲಿಜಿಯೋನ್, ಕಳೆದ 2002ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಎರಡು ಇನ್ನಿಂಗ್ಸ್‌ಗಳನ್ನು ಆಡಿದ್ದು 17 ಮತ್ತು 71 ರನ್ ಗಳಿಸಿದ್ದರು. 2000ರಲ್ಲಿ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾದ ನಂತರ ಎರಡು ವರ್ಷಗಳ ಅವಧಿಯಲ್ಲಿ 198 ರನ್ ಗಳಿಸಿದ್ದಲ್ಲದೇ ಐದು ವಿಕೆಟ್‌ಗಳನ್ನು ಕಬಳಿಸಿದ್ದರು.
 
ಒಲಿಂಪಿಕ್ ಪದಕ ಗೆಲ್ಲಬೇಕು ಎನ್ನುವುದು ಸುನ್ನೆಟ್ಟೆಳ ಕನಸಾಗಿತ್ತು. ಆದ್ದರಿಂದ,ಕ್ರಿಕೆಟ್ ತೊರೆದು ಜಾವೆಲಿನ್ ಥ್ರೋ ಕಲಿಕೆಯಲ್ಲಿ ತೊಡಗಿ ಇದೀಗ ತನ್ನ ಸಾಧನೆಯನ್ನು ಮೆರೆದಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ