ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉಸೇನ್ ಬೋಲ್ಟ್‌ಗೆ ಮೂರನೇ ಚಿನ್ನದ ಪದಕ

ಶನಿವಾರ, 29 ಆಗಸ್ಟ್ 2015 (20:33 IST)
ಒಲಿಂಪಿಕ್ ಚಾಂಪಿಯನ್, ಜಮೈಕಾದ ಉಸೇನ್ ಬೋಲ್ಟ್ ಶನಿವಾರ 4x100 ಮೀಟರ್ ರಿಲೇ ತಂಡದಲ್ಲಿ ಭಾಗಿಯಾಗಿ ಮೂರನೇ ಚಿನ್ನದ ಪದಕ  ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ ಅನ್ನು ಸ್ಮರಣೀಯವಾಗಿಸಿದ್ದಾರೆ. ಅಮೆರಿಕವು ಅನರ್ಹಗೊಂಡು ಚೀನಾಗೆ ಬೆಳ್ಳಿಪದಕವನ್ನು ಬಿಟ್ಟುಕೊಂಡಿದೆ. ಕಿಕ್ಕಿರಿದು ಪ್ರೇಕ್ಷಕರಿಂದ ತುಂಬಿದ್ದ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ಬೋಲ್ಟ್ ಫೈನಲ್ ಹಂತದಲ್ಲಿ ಓಡಿ 37. 36 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 
 
ಈ ಜಯದಿಂದ ಬೋಲ್ಟ್ ಅವರು 11ನೇ ವಿಶ್ವ ಚಿನ್ನದ ಪದಕ ವಿಜೇತರಾಗಿದ್ದಾರೆ. 2011ರಲ್ಲಿ ಡಯೇಗು ವರ್ಲ್ಡ್ಸ್‌ನಲ್ಲಿ ನಡೆದ 100 ಮೀ ಓಟದಲ್ಲಿ ಅವರು ತಪ್ಪು ಆರಂಭದಿಂದಾಗಿ ಅನರ್ಹಗೊಂಡಿದ್ದು ಅವರ ಏಕಮಾತ್ರ ವೈಫಲವಾಗಿತ್ತು.
 
ಚೀನಾ 100 ಮೀ ಫೈನಲಿಸ್ಟ್ ಸು ಬಿಂಗ್‌ಟೇನ್ ನೇತೃತ್ವದಲ್ಲಿ 38.01 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ಸ್ವದೇಶಿ ಅಭಿಮಾನಿಗಳನ್ನು ರಂಜಿಸಿತು. ಕೆನಡಾ 38. 13 ಸೆಕೆಂಡುಗಳಲ್ಲಿ ಓಡಿ ಮೂರನೇ ಸ್ಥಾನ ಪಡೆಯಿತು. 
 

ವೆಬ್ದುನಿಯಾವನ್ನು ಓದಿ