ಹಿರಿಯರ ಟಿ20 ಲೀಗ್‌ನಲ್ಲಿ ಲಾರಾ, ಅಕ್ರಮ್, ಗಿಲ್ಲಿ

ಶನಿವಾರ, 6 ಜೂನ್ 2015 (13:58 IST)
ಸ್ಟಾರ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಮಹತ್ವಾಕಾಂಕ್ಷೆಯ ಲೆಜೆಂಡ್ಸ್ ಟಿ20 ಲೀಗ್ ಅಮೆರಿಕದಲ್ಲಿ ಆರಂಭಿಸಲು ನಿರ್ಧರಿಸಿದ ಬಳಿಕ ಇನ್ನೊಂದು ಲೀಗ್ 2016ರಲ್ಲಿ ಆರಂಭವಾಗಲು ನಿಗದಿಯಾಗಿದ್ದು, ನಿವೃತ್ತ ಲೆಜೆಂಡ್‌ಗಳಾದ ಬ್ರಿಯಾನ್ ಲಾರಾ, ವಾಸಿಂ ಅಕ್ರಮ್, ಅಡಾಂ ಗಿಲ್‌ಕ್ರಿಸ್ಟ್ ಮುಂತಾದ ಖ್ಯಾತನಾಮರು ಅದರಲ್ಲಿ ಒಳಗೊಂಡಿದ್ದಾರೆ.
 
ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಎಂದು ಹೆಸರಾದ ಈ ಪಂದ್ಯಾವಳಿಯು ಫ್ರಾಂಚೈಸಿ ಆಧಾರದ ಲೀಗ್ ಆಗಿದ್ದು ಎಮೈರೇಟ್ಸ್‌ನ ಮೂರು ಸ್ಟೇಡಿಯಂಗಳಲ್ಲಿ ನಡೆಯಲಿದೆ.
 
ಈ ಪಂದ್ಯಾವಳಿಯು ತೆಂಡೂಲ್ಕರ್ ಮತ್ತು ವಾರ್ನ್ ಪ್ರಾಯೋಜಿಸಿದ್ದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಅನ್ನು ಎಮೈರೇಟ್ಸ್ ಕ್ರಿಕೆಟ್  ಮಂಡಳಿಯು 10 ವರ್ಷಗಳಿಗೆ ಅನುಮೋದನೆ ನೀಡಿದೆ. ಈ ಪಂದ್ಯಾವಳಿಯ ಸಂಘಟಕ ಮತ್ತು ಹಕ್ಕುಗಳ ಮಾಲೀಕರಾದ ಜಿಎಂ ಸ್ಫೋರ್ಟ್ಸ್ ಐಸಿಸಿಯ ಮಾರ್ಗದರ್ಶಕಗಳನ್ನು ಸೂಕ್ಷ್ಮವಾಗಿ ಅನುಸರಿಸಿದೆ.
 
ಎಂಸಿಎಲ್‌ಗೆ ಸೇರಿದ ಬ್ರಿಯಾನ್ ಲಾರಾ ಸ್ಪರ್ಧಾತ್ಮಕ ಕ್ರಿಕೆಟ್‌ ಪ್ರದರ್ಶನದ ಭರವಸೆ ನೀಡಿರುವ ಇದರಲ್ಲಿ ಭಾಗವಹಿಸಲು ನಾನು ಪುಳಕಗೊಂಡಿದ್ದೇನೆ. ದೊಡ್ಡ ಅಭಿಮಾನಿಗಳ ನೆಲೆ ಹೊಂದಿರುವ  ಯುಎಇ ಇಂತಹ ಪಂದ್ಯಾವಳಿಗೆ ಉತ್ತಮ ಸ್ಥಳ ಎಂದು ಲಾರಾ ತಮ್ಮ ವೃತ್ತಿಜೀವನವನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಲು ಬಯಸುವ ಹೀರೋಗಳನ್ನು ಜನರು ಬೆಂಬಲಿಸುತ್ತಾರೆಂಬ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ