ಭಾರತ-ಆಸ್ಟ್ರೇಲಿಯಾ ಟಿ20: ಐಪಿಎಲ್ ಗೆ ಮೊದಲು ತವರಿನ ಪ್ರೇಕ್ಷಕರ ಎದುರು ಮಿಂಚಲು ಕೊಹ್ಲಿಗೆ ಚಾನ್ಸ್

ಬುಧವಾರ, 27 ಫೆಬ್ರವರಿ 2019 (08:52 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯ ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ಈಗಾಗಲೇ ಸರಣಿಯಲ್ಲಿ 0-1 ರಿಂದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಈ ಪಂದ್ಯ ಮಹತ್ವದ್ದಾಗಿದ್ದು, ಇಂದು ಸೋತರೆ ಸರಣಿ ಕಳೆದುಕೊಂಡಂತೆ. ತವರಿನಲ್ಲಿ ಮಾನ ಉಳಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆಗೆ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಕೊಹ್ಲಿಗೆ ಬೆಂಗಳೂರು ಎಂದರೆ ಎರಡನೇ ತವರು ಇದ್ದಂತೆ. ಇಲ್ಲಿ ಕೆಲವು ದಿನಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೇತೃತ್ವ ವಹಿಸಬೇಕಿರುವ ಕೊಹ್ಲಿ ಐಪಿಎಲ್ ಗೆ ಮೊದಲು ತವರಿನ ಪ್ರೇಕ್ಷಕರ ಎದುರು ವಿಜೃಂಬಿಸಬೇಕಿದೆ. ಕಳೆದ ಪಂದ್ಯದಲ್ಲಿ ಕೊಹ್ಲಿ ತಕ್ಕ ಸಮಯದಲ್ಲೇ ವಿಕೆಟ್ ಕೈ ಚೆಲ್ಲಿದ್ದೂ ಭಾರತದ ಸೋಲಿಗೆ ಕಾರಣವಾಗಿತ್ತು.

ಅಲ್ಲದೆ, ಕೆಳ ಕ್ರಮಾಂಕ ನಿರೀಕ್ಷಿಸಿದಂತೆ ಬ್ಯಾಟಿಂಗ್ ಮಾಡದೇ ಇದ್ದಿದ್ದು, ಭಾರತಕ್ಕೆ ದುಬಾರಿಯಾಯಿತು. ಆದರೆ ಈ ಪಂದ್ಯದಲ್ಲಿ ಆ ತಪ್ಪುಗಳನ್ನು ಸರಿಪಡಿಸುವ ನಿರೀಕ್ಷೆಯಲ್ಲಿ ಭಾರತವಿದೆ.

ಇನ್ನು ಕಳೆದ ಪಂದ್ಯದಲ್ಲಿ ದುಬಾರಿಯಾದ ಉಮೇಶ್ ಯಾದವ್ ಈ ಪಂದ್ಯದಲ್ಲಿ ಸ್ಥಾನ ಕಳೆದುಕೊಂಡರೂ ಅಚ್ಚರಿಯಿಲ್ಲ. ಉಳಿದಂತೆ ಭಾರತ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.

ಪಂದ್ಯ ಆರಂಭ ಸಮಯ: ಸಂಜೆ 7 ಗಂಟೆಗೆ.
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ